ಮಾಜಿ ಕ್ರಿಗೆಟಿಗ, ರಣಜಿ ಕ್ರಿಕೆಟ್ ದಿಗ್ಗಜ ರಾಜಿಂದರ್ ಗೊಯೆಲ್ ಇನ್ನಿಲ್ಲ
Published by Basavaraj Halli
22 ಜೂನ್ 2020
ಕೋಲ್ಕತ್ತಾ : ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್, ರಣಜಿ ಕ್ರಿಕೆಟ್ ನ ದಿಗ್ಗಜ ಎಂದೇ ಖ್ಯಾತರಾಗಿದ್ದ ರಾಜಿಂದರ್ ಗೊಯೆಲ್ ಅವರು ತಮ್ಮ 77 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ರಾಜಿಂದರ್ ಗೋಯೆಲ್ ಅವರು ಭಾರತ ತಂಡದ ಪರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲವಾದರೂ, ದೇಶೀಯ ವಲಯದಲ್ಲಿ ಉತ್ತಮ ಸ್ಪಿನ್ನರ್ ಆಗಿ ಪರಿಚಯಿಸಿಕೊಂಡಿದ್ದರು.
* ರಾಜಿಂದರ್ 157 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಭಾಗಿಯಾಗಿದ್ದು, ಹರ್ಯಾಣ ಪರವಾಗಿ 750 ವಿಕೆಟ್ ಕಬಳಿಸಿದ್ದರು.
* ರಣಜಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ರಾಜಿಂದರ್ ಅವರ ಹೆಸರಲ್ಲಿದೆ.
ಅವರು 637 ವಿಕೆಟ್ ಪಡೆದಿದ್ದಾರೆ.
* 1957-58ರಲ್ಲಿ ರಣಜಿ ಪದಾರ್ಪಣೆ ಮಾಡಿದ್ದ ಗೋಯಲ್ ತನ್ನ 44 ವಯಸ್ಸಿನಲ್ಲಿ ವಿದಾಯ ಹೇಳಿದ್ದರು.
* 2017ರಲ್ಲಿ ಬಿಸಿಸಿಐ ರಾಜಿಂದರ್ ಗೋಯೆಲ್ ಅವರಿಗೆ ಸಿಕೆ ನಾಯ್ಡು ಜೀವಮಾನದ ಸಾಧನೆ ಪುರಸ್ಕಾರ ನೀಡಲಾಗಿತ್ತು.