ಬೆಂಗಳೂರು : ಬೆಂಗಳೂರು ನಗರದ ಹೊರವಲಯದಲ್ಲಿರುವ ವಿದ್ಯಾನಗರದ ಕ್ರೀಡಾವಸತಿ ಶಾಲೆ ಕೇಂದ್ರಕ್ಕೆ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರದ ಮಾನ್ಯತೆ ಸಿಗಲಿದೆ. ಕೇಂದ್ರ ಕ್ರೀಡಾ ಇಲಾಖೆಯು ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಒಟ್ಟು ಎಂಟು ರಾಜ್ಯಗಳಿಗೆ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗುವದು ಅದರಲ್ಲಿ ಕರ್ನಾಟಕವೂ ಒಂದು. ಕಳೆದ ವರ್ಷವೇ ರಾಜ್ಯ ಕ್ರೀಡಾ ಇಲಾಖೆಯು ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರ ಸ್ಪಾಪನೆಗೆ ಪ್ರಸ್ತಾವ ಸಲ್ಲಿಸಿತ್ತು. * ವಿದ್ಯಾನಗರ ಕೇಂದ್ರದಲ್ಲಿ ಉತ್ತಮ ಮೂಲಸೌಲಭ್ಯಗಲಿದ್ದು ಸುಮಾರು 68 ಎಕರೆ ಜಾಗದಲ್ಲಿ ಅಥ್ಲೆಟಿಕ್ಸ್‌, ವಾಲಿಬಾಲ್‌, ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯ ಉತ್ತಮ ಸೌಲಭ್ಯಗಳು ಇವೆ. ಜೊತೆಗೆ ಒಳಾಂಗಣ ಕ್ರೀಡಾಂಗಣ 10 ಮೀಟರ್‌ ಶೂಟಿಂಗ್ ರೇಂಜ್, ಜಿಮ್ನಾಷಿಯಂ ಸೇರಿ ವಸತಿ ಸಂಕೀರ್ಣವನ್ನು ಒಳಗೊಂಡಿದೆ. ಅಲ್ಲದೆ ಇಲ್ಲಿ ಈಜುಗೊಳವನ್ನು ಕಾಣಬಹುದಾಗಿದೆ. ಆದ್ದರಿಂದ ಇಲ್ಲಿಗೆ ಶ್ರೇಷ್ಠತಾ ಕೇಂದ್ರದ ಮಾನ್ಯತೆ ಸಿಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು' ಎಂದು ಇಲಾಖೆಯ ಮೂಲಗಳು ತಿಳಿಸಿವೆ. * 'ಮೆಗಾ ಸೆಂಟರ್‌' ಎಂಬ ಹೆಸರಿನಲ್ಲಿ ಈ ಶ್ರೇಷ್ಠತಾ ಕೇಂದ್ರವು ಕಾರ್ಯ ನಿರ್ವಹಿಸುತ್ತದೆ. * ಕರ್ನಾಟಕ, ಒಡಿಶಾ, ಕೇರಳ, ತೆಲಂಗಾಣ, ಅರುಣಾಚಲಪ್ರದೇಶ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ಲ್ಲಿ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ಅಂತಿಮಗೊಳಿಸಿದೆ.