ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ
Published by Basavaraj Halli
15 ಜೂನ್ 2020
ಜೂನ್ 14, 2020 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
*ಹಲವಾರು TV ಸೀರೀಸ್ ಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಇವರು, ಇತ್ತೀಚಿಗೆ ಭಾರತೀಯ ಕ್ರಿಕೆಟರ್ ಎಂ ಎಸ್ ಧೋನಿಯವರ ಕುರಿತಾದ "ಎಂ ಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ" ಮುಖ್ಯ ಪಾತ್ರದಲ್ಲಿ ನಟಿಸಿ, ಈ ಚಿತ್ರದಲ್ಲಿನ ನಟನೆಗಾಗಿ 2017 ರಲ್ಲಿ ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಹಲವು ಸ್ಕ್ರೀನ್ ಪ್ರಶಸ್ತಿಗಳು, ಗಿಲ್ಡ್ ಪ್ರಶಸ್ತಿಗಳು, ಐಟಿಎ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.