ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳು ಕೋರೋಣ ಮುಕ್ತ
Published by Siddaram Halli
06 ಜೂನ್ 2020
ಚಾಮರಾಜನಗರ: ಇಡೀ ದಕ್ಷಿಣ ಭಾರತದಲ್ಲಿ ಪ್ರಸ್ತುತ ಎರಡೇ ಎರಡು ಜಿಲ್ಲೆಗಳು ಕೋವಿಡ್ ಸೋಂಕಿನ ಭೀತಿಯಿಂದ ಮುಕ್ತವಾಗಿವೆ. ಆ ಎರಡು ಜಿಲ್ಲೆಗಳೆಂದರೆ ಒಂದು ಕರ್ನಾಟಕದ ಚಾಮರಾಜನಗರ ಮತ್ತು ತೆಲಂಗಾಣದ ವಾರಂಗಲ್ ಗ್ರಾಮಾಂತರ.
* ಚಾಮರಾಜನಗರ ಜಿಲ್ಲೆ ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆ ಎಂಬುದು ಖಚಿತವಾಗಿದೆ.
* ದಕ್ಷಿಣ ಭಾರತದಲ್ಲಿ ಕೇವಲ ಎರಡು ಜಿಲ್ಲೆಗಳು ಮಾತ್ರ ಕೋವಿಡ್ ಮುಕ್ತ ವಾಗಿದ್ದು, ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದ ಎಲ್ಲ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.
* ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆಯಾದ ಚಾಮರಾಜನಗರ ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜೊತೆ ಈ ಗೌರವ ಹಂಚಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದೆ.