ಈ ಮೊದಲು ಸರಿತಾ ಕೋಮಟಿ ರೆಡ್ಡಿ ಅವರು ನ್ಯೂಯಾರ್ಕ್​ನ ಈಸ್ಟರ್ನ್ ಡಿಸ್ಟ್ರಿಕ್ಟ್​​ನ ಯುಎಸ್ ಅಟರ್ನಿ ಕಚೇರಿಯ ಜನರಲ್ ಕ್ರೈಮ್ಸ್ ಉಪ ಮುಖ್ಯಸ್ಥರಾಗಿ ಮತ್ತು ಕೊಲಂಬಿಯಾ ಲಾ ಸ್ಕೂಲ್​ನಲ್ಲಿಯೂ ಉಪನ್ಯಾಸಕಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಸರಿತಾ ಕೋಮಟಿ ರೆಡ್ಡಿ ಅವರು ನ್ಯೂಯಾರ್ಕ್ ಫೆಡರಲ್ ಕೋರ್ಟ್​ನ ಜಡ್ಜ್ ಆಗಿ ನೇಮಕ ಗೊಂಡಿದ್ದಾರೆ. ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಸರಿತಾರನ್ನ ನಾಮನಿರ್ದೇಶನ ಮಾಡಿ, ಯುಎಸ್ ಸೆನೆಟ್​ಗೆ ಕಳಿಸಿಕೊಟ್ಟಿದ್ದಾರೆ.