ಪುಂಡರ ನಿಗ್ರಹಿಸಲು ಕೇಂದ್ರ, ರಾಜ್ಯ ಸರ್ಕಾರದಿಂದ 'ಸುಗ್ರೀವಾಜ್ಞೆ'
Published by Siddaram Halli
23 ಏಪ್ರಿಲ್ 2020
ದೇಶದಲ್ಲಿ ವ್ಯಾಪಿಸಿರುವ ಕೋರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಹಾಗೂ ಸೇವಾನಿರತರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಹಲ್ಲೆಗಳು ನಡೆದ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೋರೋಣ ಯೋಧರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ.
* ಕೇಂದ್ರ ಸರ್ಕಾರದ ಹೊಸ ಕಾನೂನಿನ ಪ್ರಕಾರ ಹಲ್ಲೆಕೋರರಿಗೆ 7ವರ್ಷ ಜೈಲು 5 ಲಕ್ಷ ರೂಪಾಯಿ ದಂಡ ಶಿಕ್ಷೆ ನೀಡಲು ಕಾನೂನು ತರಲಾಗಿದೆ.
* ಅದೇ ರೀತಿ ರಾಜ್ಯದಲ್ಲಿ ಹಲ್ಲೆಕೋರರಿಗೆ 5 ಲಕ್ಷ ರೂಪಾಯಿವರೆಗೆ ದಂಡ, ಆಸ್ತಿ ಹಾನಿ ಮಾಡಿದರೆ ದುಪ್ಪಟ್ಟು ದಂಡ ವಸೂಲಿ ಜೊತೆಗೆ 3 ವರ್ಷವರೆಗೆ ಜೈಲು ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ.