ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಮುಖ್ಯ ಸಹಾಯಕ ಕರೋನ ಸೋಂಕಿನಿಂದ ನಿಧನ
Published by Basavaraj Halli
19 ಏಪ್ರಿಲ್ 2020
ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಮುಖ್ಯ ಸಹಾಯಕ ಅಬ್ಬಾ ಕ್ಯಾರಿ ಅವರು ಏಪ್ರಿಲ್ 17, 2020 ರಂದು COVID-19 ಸೋಂಕಿನಿಂದ ನಿಧನರಾದರು. ಹಲವು ದಿನಗಳಿಂದ ಅವರು ಕರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು.
* ಅಬ್ಬಾ ಕಯಾರಿ(Abba Kyari) : ಅಬ್ಬಾ ಕ್ಯಾರಿ ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಮುಖ್ಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮಾಜಿ ಮಿಲಿಟರಿ ಆಡಳಿತಗಾರರಾಗಿದ್ದರು.
* ಮುಹಮ್ಮದು ಬುಹಾರಿ : ಮುಹಮ್ಮದು ಬುಹಾರಿ ನೈಜೀರಿಯಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಮತ್ತು ಅವರು 1983 ಮತ್ತು 1985 ರ ನಡುವೆ ಮಿಲಿಟರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
2014 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಸಾಧಿಸಿ ಪ್ರಸ್ತುತ ನೈಜೀರಿಯಾದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.