ಮಂಗಳವಾರ, 24 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮಾರ್ಚ್ 24 ವಿಶ್ವ ಕ್ಷಯ ರೋಗ ದಿನ
Authored by:
Basavaraj Halli
ದಿನಾಂಕ ಮಾರ್ಚ್ 24 ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತಿದ್ದು. ಕಳೆದ ದಿನಗಳಲ್ಲಿ ಇದು ಕೂಡ ಭೀತಿ ಹುಟ್ಟಿಸಿದ್ದ ಸಾಂಕ್ರಾಮಿಕ ಕಾಯಿಲೆಯೇ ಆಗಿತ್ತು.
ಸಾಂಕ್ರಾಮಿಕ ರೋಗವಾದ ಕ್ಷಯವು ಒಂದು ಕಾಲದಲ್ಲಿ ಜಗತ್ತನ್ನೇ ನಡುಗಿಸಿತ್ತು. ಕ್ಷಯವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಯಾವುದೇ ವಯಸ್ಸಿನವರಿಗೂ ಕಾಡಬಹುದಾದ ರೋಗವಾಗಿದೆ. ಈ ಕ್ಷಯ ರೋಗದ ಬಗ್ಗೆ ಜಾಗೃತಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ದಿನಾಂಕ ಮಾರ್ಚ್ 24ರಂದು ವಿಶ್ವ ಕ್ಷಯರೋಗ ಜಾಗೃತಿ ದಿನವನ್ನಾಗಿ ಆಚರಿಸುತ್ತದೆ.
* ಕ್ಷಯರೋಗ ಅಥವಾ ಟ್ಯುಬರ್‌ಕ್ಯುಲೋಸಿಸ್ (ಟಿ.ಬಿ.) ಎಂದೇ ಕರೆಯಿಸಿಕೊಳ್ಳುವ ಈ ಕಾಯಿಲೆಯು ಮನುಷ್ಯರು ಮತ್ತು ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ.