ನವದೆಹಲಿ: ದಿನಾಂಕ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವವಿಖ್ಯಾತ ಆಗ್ರಾದ ತಾಜ್​ಮಹಲ್​ ಸೇರಿ ದೇಶದ ಎಲ್ಲ ಸಂರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗುವುದೆಂದು ಎಂದು ಭಾರತ ಪುರಾತತ್ವ ಸಮೀಕ್ಷಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿರುವ ಸ್ಮಾರಕಗಳಾದ ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತಾಜ್ ಮಹಲ್, ಕೊನಾರ್ಕ್​ನ ಸೂರ್ಯ ದೇವಾಲಯ, ಮಾಮಲ್ಲಾಪುರಂ, ಎಲ್ಲೋರಾ ಗುಹೆಗಳು, ಖಜುರಾಹೊ ಸ್ಮಾರಕಗಳು ಮತ್ತು ಅಜಂತಾ ಗುಹೆಗಳು ಸೇರಿ ಎಲ್ಲ ಸಂರಕ್ಷಿತಾ ಸ್ಮಾರಕಗಳನ್ನು ವೀಕ್ಷಿಸಲು ಮಹಿಳೆಯರಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.