ರವಿವಾರ, 01 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಟೌನ್ ಹಾಲ್ ಬಳಿ ಪ್ರತಿಭಟನೆಗೆ ಇಲ್ಲ ಅವಕಾಶ : ಮೇಯರ್ ಗೌತಮ್ ಕುಮಾರ್
Authored by:
Basavaraj Halli
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಆದರೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವರ ರಾಜಧಾನಿ ಎಂದರೆ ಅದುವೇ ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್. ಆದರೆ ಇನ್ನುಮುಂದೆ ಇಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅನುಮತಿ ನೀಡಲಾಗುವದಿಲ್ಲವೆಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಇನ್ಮುಂದೆ ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ನೀಡಲಾಗುವದಿಲ್ಲ.