ಶುಕ್ರವಾರ, 28 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಅತಿಹೆಚ್ಚು ಶ್ರೀಮಂತರರಿರುವ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ
Authored by:
Basavaraj Halli
ಭಾರತದಲ್ಲಿ 2019 ರಲ್ಲಿ ಪ್ರತೀ ತಿಂಗಳಿಗೆ 3 ಬಿಲಿಯನೇರ್‌ಗಳು ಹೆಚ್ಚುತ್ತಿದ್ದಾರೆ. ಆದ್ದರಿಂದ ಭಾರತ ದೇಶದಲ್ಲಿ ಒಟ್ಟು ಕೋಟ್ಯಧಿಪತಿಗಳ ಸಂಖ್ಯೆ 138ಕ್ಕೇರಿದೆ. ಈ ಮೂಲಕವಾಗಿ ಜಾಗತಿಕವಾಗಿ ಅತಿಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ಲಭಿಸಿದೆ.
* ಒಟ್ಟು 799 ಬಿಲಿಯನೇರ್‌ಗಳನ್ನು ಹೊಂದಿರುವ ಚೀನ ಮೊದಲ ಸ್ಥಾನದಲ್ಲಿದ್ದು, 626 ಬಿಲಿಯನೇರ್‌ಗಳನ್ನು ಹೊಂದಿರುವ ಅಮೆರಿಕ ಎರಡನೇ ಸ್ಥಾನವನ್ನು ಪಡೆದಿದೆ.
* ಭಾರತದಲ್ಲಿ ಅತಿಹೆಚ್ಚು ಹೊಂದಿರುವ ನಗರ ಮುಂಬಯಿಯಾಗಿದೆ, ಇಲ್ಲಿ ಸುಮಾರು 50 ಬಿಲಿಯನೇರ್‌ಗಳು ನೆಲೆಸಿದ್ದಾರೆ. ಜಗತ್ತಿನಲ್ಲಿ ಮುಂಬಯಿ 9ನೇ ಸ್ಥಾನದಲ್ಲಿದೆ.
*ಒಟ್ಟು 67 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ಮುಖೇಶ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.