ನರೇಂದ್ರ ಮೋದಿ ಅವರೇ ಭಾರತದ ಅತ್ಯುತ್ತಮ ಪ್ರಧಾನಿ ಎಂದು ಕನಿಷ್ಠ ಶೇ 34ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರ ಬಳಿಕ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಸ್ಥಾನ ಪಡೆದಿದ್ದಾರೆ. ಇಂಡಿಯಾ ಟುಡೆ ಸಮೂಹ ಮತ್ತು ಕಾರ್ವಿ ಇನ್‌ಸೈಟ್ಸ್ ಲಿಮಿಟೆಡ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ (ಎಂಓಟಿಎನ್) ಈ ಮಾಹಿತಿ ನೀಡಿದೆ.