ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ.ನಮ್ಮ ದೇಶದಲ್ಲಿ ಹಲವಾರು ಮಹಿಳೆಯರು ಆದರ್ಶಪ್ರಾಯರಾಗಿದ್ದು, ಆ ಸಾಲಿಗೆ ಆನಂದಿ ಬಾಯಿ ಜೋಶಿ ಕೂಡಾ ಒಬ್ಬರಾಗಿದ್ದಾರೆ. ಈಕೆ ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ.31 ಮಾರ್ಚ್ 1865ರಲ್ಲಿ ಪೂನಾದಲ್ಲಿ ಜನಿಸಿದ ಆನಂದಿ ಅವರ ಬಾಲ್ಯದ ಹೆಸರು ಯಮುನಾ ಎಂದಾಗಿತ್ತು. ಒಂಬತ್ತನೇ ವಯಸ್ಸಿಗೆ ವಿವಾಹವಾದರು ಸಹ, ಪತಿ ಗೋಪಾಲ್ ರಾವ್ ಅವರ ಪ್ರೋತ್ಸಾಹದಿಂದ ಶಿಕ್ಷಣ ಪಡೆಯುವಂತಾಯಿತು.