ಮಂಗಳವಾರ, 21 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದಲ್ಲಿ ತೀವ್ರ ಕುಸಿತವು ವಿಶ್ವ ಆರ್ಥಿಕತೆ ಮೇಲೆ ಎಳೆಯುತ್ತಿದೆ: IMF
Authored by:
Basavaraj Halli
ವಿಶ್ವಸಂಸ್ಥೆ : ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ತೀವ್ರವಾಗಿ ಕಡಿತಗೊಳಿಸಿದೆ. ಕಳೆದ ವರುಷದ ಆಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮಂಗಳವಾರ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಜಿಡಿಪಿ ಶೇ.6.1ಕ್ಕೆ ಕುಸಿಯಲಿದೆ ಎಂದು ಹೇಳಿತ್ತು.
ಇದು 2021 ರ ಜಾಗತಿಕ ಆರ್ಥಿಕ ಪ್ರಕ್ಷೇಪಗಳನ್ನು ಶೇಕಡಾ 0.2 ರಷ್ಟು ಕಡಿತಗೊಳಿಸಿ 3.4 ಕ್ಕೆ ಇಳಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇಕಡಾ 1 ರಿಂದ 5.8 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಐಎಂಎಫ್ ಈ ವರ್ಷ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಎರಡನೇ ಪ್ರಮುಖ ಆರ್ಥಿಕತೆ ದೇಶದ ಅಂಥ ಉಲ್ಲೇಖ ಮಾಡಿದೆ. ಐಎಂ ಪ್ರಕಾರ, 2021 ರಲ್ಲಿ ಭಾರತವು ಅಗ್ರ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.
ಭಾರತದ ಬೆಳವಣಿಗೆಯ ದರವನ್ನು ಇಳಿಸಲು 'ಬ್ಯಾಂಕೇತರ ಹಣಕಾಸು ವಲಯದ ಒತ್ತಡ ಮತ್ತು ಸಾಲದ ಬೆಳವಣಿಗೆಯ ಕುಸಿತದ ಮಧ್ಯೆ ದೇಶೀಯ ಬೇಡಿಕೆ ನಿರೀಕ್ಷೆಗಿಂತ ತೀವ್ರವಾಗಿ ನಿಧಾನವಾಗಿದೆ' ಎಂದು ಐಎಂಎಫ್ ಹೇಳಿದೆ.