ಸೋಮವಾರ, 20 ಜನವರಿ 2020
5:30 ಪೂರ್ವಾಹ್ನ
Daily PDF
'ಜಲ್-ಜೀವನ್-ಹರಿಯಾಲಿ': ದಾಖಲೆ ನಿರ್ಮಿಸಿದ 18,340 ಕಿ.ಮೀ. ಮಾನವ ಸರಪಳಿ!
Authored by:
Basavaraj Halli
ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಅಭಿಯಾನದ 'ಜಲ್-ಜೀವನ್-ಹರಿಯಾಲಿ' (ಹಸಿರು ಜಲಜೀವನ) ಅಂಗವಾಗಿ ಇಂದು ಬಕ್ಸರ್ ನಿಂದ ಜಾರ್ಖಂಡ್ ರಾಜ್ಯದ ಗಡಿಭಾಗ ಭಗಲ್ಪುರದವರೆಗೆ ಗಂಗಾನದಿಯ ತೀರದುದ್ದಕ್ಕೂ ಸುಮಾರು 18,340 ಕಿಲೋ ಮೀಟರ್ ಉದ್ದಕ್ಕೆ ನಿರ್ಮಿಸಲಾದ ಬೃಹತ್ ಮಾನವ ಸರಪಳಿ ಹೊಸ ದಾಖಲೆಗೆ ಪಾತ್ರವಾಯಿತು.
ಸುಮಾರು 4.27 ಕೋಟಿ ಜನರು ಈ ಮಾನವ ಸರಪಳಿ ನಿರ್ಮಾಣದಲ್ಲಿ ಕೈಜೋಡಿಸಿದ್ದರು ಮತ್ತು ಇವರೆಲ್ಲರ ಸಹಕಾರದಿಂದ 18.34ಸಾವಿರ ಕಿಲೋ ಮೀಟರ್ ಉದ್ದದ ಈ ಮಾನವ ಸರಪಳಿ ನಿರ್ಮಾಣವಾಗುವ ಮೂಲಕ ಈ ಹಿಂದಿನ ದಾಖಲೆಯನ್ನು ಇದು ಅಳಿಸಿ ಹಾಕಿದೆ ಎಂಬ ಮಾಹಿತಿಯನ್ನು ಬಿಹಾರ ಸರಕಾರದ ಮುಖ್ಯಕಾರ್ಯದರ್ಶಿ ದೀಪಕ್ ಕುಮಾರ್ ಅವರು ನೀಡಿದ್ದಾರೆ.
ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ 45 ಲಕ್ಷ ಜನರು ಇದರಲ್ಲಿ ಭಾಗವಹಿಸಿದರೆ ವಾರ್ಡ್ ಮಟ್ಟಗಳಲ್ಲಿ ಒಂದು ಕೊಟಿ 13 ಲಕ್ಷದ 44 ಸಾವಿರ ಜನರು ಒಟ್ಟಾಗುವ ಮೂಲಕ ಈ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿತು. ಇನ್ನು 57 ಲಕ್ಷ ವಿದ್ಯಾರ್ಥಿಗಳು ಹಾಗೂ 76 ಸಾವಿರ ಬೋಧಕ ಸಿಬ್ಬಂದಿಯೂ ಸಹ ಈ ಬೃಹತ್ ಮಾನವ ಸರಪಳಿಯ ಭಾಗವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.