ಸೋಮವಾರ, 20 ಜನವರಿ 2020
5:30 ಪೂರ್ವಾಹ್ನ
Daily PDF
ಗಣತಂತ್ರ ದಿವಸವೂ ಮಿಂಚಲಿದ್ದಾರೆ ಈ ಮಹಿಳಾ ಸಿಪಾಯಿ ತಾನಿಯಾ ಶೆರ್ಗಿಲ್
Authored by:
Basavaraj Halli
ಸೇನಾ ದಿವಸದಂದು ನಡೆದ ರಾಷ್ಟ್ರಮಟ್ಟದ ಕವಾಯತಿನಲ್ಲಿ ಪುರುಷ ಸಿಪಾಯಿಗಳೇ ಇದ್ದ ತಂಡವೊಂದನ್ನು ಮುನ್ನಡೆಸುವ ಮೂಲಕ ಭಾರೀ ಸದ್ದು ಮಾಡಿದ ತಾನಿಯಾ ಶೆರ್ಗಿಲ್, ಗಣತಂತ್ರ ದಿನದ ಪರೇಡ್ ವೇಳೆಯೂ ಇಂಥದ್ದೇ ಸಾಧನೆಗೈಯ್ಯಲಿದ್ದಾರೆ.
ನಾಗ್ಪುರ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ತಾನಿಯಾ, ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ಮಿಲಿಟರಿ ತರಬೇತಿ ಪಡೆದಿದ್ದು, ಸಿಗ್ನಲ್ ವಿಭಾಗದಲ್ಲಿ ಅಧಿಕಾರಿಯಾಗಿದ್ದಾರೆ.
ಈ ವರ್ಷದ ಗಣತಂತ್ರ ದಿವಸದಂದು ಪುರುಷರೇ ಇರಲಿರುವ ಕವಾಯತು ತಂಡವೊಂದನ್ನು ತಾನಿಯಾ ಮುನ್ನಡೆಸಲಿದ್ದು, ಅವರ ಕೀರ್ತಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಕೊಳ್ಳಲಿದೆ.
ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ, ಗಣ್ಯಾತಿ ಗಣ್ಯರಿಂದಲೇ ತುಂಬಿದ್ದ ವೇದಿಕೆಯೆದುರು, ಖಾಕಿ ಸಮವಸ್ತ್ರಧಾರಿಯಾಗಿ, ಖಡ್ಗ ಹಿಡಿದುಕೊಂಡು ತನ್ನ ತಂಡವನ್ನು ಮುನ್ನಡೆಸುವ ಆ ಠಾಕು ಠೀಕಿನ ನಡೆಯ ಮೂಲಕ ಮೈನವಿರೇಳುವಂತೆ ಮಾಡಿದ ತಾನಿಯಾ ಈಗ ಎಲ್ಲರ ಕಣ್ಮಣಿ.