ಲೆ. ಜನರಲ್ ಎಸ್ ಕೆ ಸೈನಿ ಭಾರತೀಯ ಸೇನೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ
Published by Basavaraj Halli
19 ಜನವರಿ 2020
ದಕ್ಷಿಣ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಭಾರತೀಯ ಸೇನೆಯ ಹೊಸ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಜನವರಿ 25ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಲೆಫ್ಟಿನೆಂಟ್ ಜನರಲ್ ಎಂ.ಎಂ.ನಾರವನೆ ಸೇನಾ ಮುಖ್ಯಸ್ಥರಾದ ನಂತರ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಹುದ್ದೆ ಖಾಲಿಯಾಗಿತ್ತು. ಇದೀಗ ಸೈನಿ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ ಸೈನಿ ರಾಷ್ಟ್ರೀಯ ಭದ್ರತಾ ಪಡೆ ತರಬೇತಿ ಕೇಂದ್ರದಲ್ಲಿ ಶಸ್ತ್ರಾಸ್ತ್ರ ತರಬೇತಿದಾರ, ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಿರಿಯ ನಿರ್ದೇಶಕ ಸಿಬ್ಬಂದಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿದ್ದರು.