ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
ತ್ರಿಸೇನಾಪಡೆ ವರಿಷ್ಠರಿಗೆ ಸೇನಾ ಮುಖ್ಯಸ್ಥರ ಮೇಲೆ ವಿಶೇಷ ಅಧಿಕಾರವಿದೆ: ಬಿಪಿನ್ ರಾವತ್
Authored by:
Basavaraj Halli
ತ್ರಿಸೇನಾಪಡೆಗಳ ವರಿಷ್ಠ, ಸಮಾನರಲ್ಲಿ ಮೊದಲಿಗನಾಗಿರುತ್ತಾನೆ ಹಾಗೂ ಕಾರ್ಯಾಚರಣೆಯ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಮೂರೂ ಸೇನಾಪಡೆಗಳ ಮುಖ್ಯಸ್ಥರುಗಳ ಮೇಲೆ ಆತ ಕೆಲವೊಂದು ಅಧಿಕಾರಗಳನ್ನು ಹೊಂದಿರುತ್ತಾನೆ ಎಂದು ಜನರಲ್ ಬಿಪಿನ್ ರಾವತ್ ಗುರುವಾರ ತಿಳಿಸಿದ್ದಾರೆ.
ಭಾರತದ ಪ್ರಪ್ರಥಮ ತ್ರಿಸೇನಾಪಡೆಗಳ ಮಹಾವರಿಷ್ಠನಾಗಿ ಜನರಲ್ ಬಿಪಿನ್ ರಾವತ್ ಅವರು ಜನವರಿ 1ರಂದು ಅಧಿಕಾರ ವಹಿಸಿಕೊಂಡಿದ್ದರು.
ಹೊಸದಿಲ್ಲಿಯಲ್ಲಿ ಗುರುವಾರ ನಡೆದ 'ರೈಸಿನಾ ಸಂವಾದ 2020' ಕಾರ್ಯಕ್ರಮದ ಅಂಗವಾಗಿ ನಡೆದ ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು '' ತ್ರಿಸೇನಾ ಪಡೆ ವರಿಷ್ಠ ಸಮಾನರಲ್ಲಿ ಮೊದಲಿಗರುವುದರಿಂದ ಕಾರ್ಯಾಚರಣೆಯ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಮೂರು ಸೇನಾಪಡೆಗಳ ವರಿಷ್ಠರ ಮೇಲೆ ಕೆಲವೊಂದು ಅಧಿಕಾರವನ್ನು ಹೊಂದಿದ್ದಾರೆ'' ಎಂದು ಜನರಲ್ ರಾವತ್ ಅಭಿಪ್ರಾಯಿಸಿದರು.