ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
ಜ.31ರಿಂದ ಏ.3ರವರೆಗೆ ಸಂಸತ್ ಬಜೆಟ್ ಅಧಿವೇಶನ
Authored by:
Basavaraj Halli
ಸಂಸತ್ತಿನ ಬಜೆಟ್ ಅಧಿವೇಶನ ಜ.31ರಿಂದ ಏ.3ರವರೆಗೆ ನಡೆಯಲಿದ್ದು ,ಫೆ.1ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಂಗಡಪತ್ರ ಮಂಡನೆಯಾಗಲಿದೆ. ಜ.31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ.
2020ರ ಜ.31ರಂದು ಸಭೆ ಸೇರುವಂತೆ ಲೋಕಸಭೆ ಮತ್ತು ರಾಜ್ಯಸಭೆಗೆ ಸೂಚಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಸಂಸತ್ತಿನ ಕಲಾಪಗಳಿಗನುಗುಣವಾಗಿ ಏ.3 ರವರೆಗೆ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಇದು ಈ ವರ್ಷದ ಮೊದಲ ಅಧಿವೇಶನವಾಗಿರಲಿದೆ.