ಸೋಮವಾರ, 13 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದ ಸಂಸ್ಕೃತಿ, ಪರಂಪರೆ ರಕ್ಷಣೆಗೆ ಕೇಂದ್ರದಿಂದ `ರಾಷ್ಟ್ರೀಯ ಮಿಷನ್' : ಪ್ರಧಾನಿ ಮೋದಿ ಘೋಷಣೆ
Authored by:
Basavaraj Halli
ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಮಿಷನ್ ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಮರು ಆವಿಷ್ಕಾರ, ಮರು ಹಂಚಿಕೆ, ಮರು ನವೀನ ಮತ್ತು ರಕ್ಷಿಸಲು ಕೋಲ್ಕತ್ತಾದಿಂದ ರಾಷ್ಟ್ರೀಯ ಮಿಷನ್ ಆರಂಭಿಸುತ್ತಿದ್ದೇವೆ ಎಂದು ಘೋಷಿಸಿದರು.
ರಾಷ್ಟ್ರೀಯ ಮಿಷನ್ ಅನ್ನು ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ ನಿಂದ ಆರಂಭಿಸುತ್ತಿದ್ದೇವೆ. ದೇಶದಲ್ಲಿ 5 ಸಾಂಪ್ರದಾಯಿಕ ವಸ್ತು ಸಂಗ್ರಹಾಲಯಗಳನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.