ರವಿವಾರ, 12 ಜನವರಿ 2020
5:30 ಪೂರ್ವಾಹ್ನ
Daily PDF
ಉತ್ತಮ ಕೆಲಸ ಮಾಡಿದ್ರೇ PDOಗಳಿಗೆ ಸಿಗಲಿದೆ 'ಸ್ಟಾರ್ ಆಫ್ ದಿ ವೀಕ್ ಅವಾರ್ಡ್'
Authored by:
Basavaraj Halli
ರಾಜ್ಯದ ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ದಕ್ಷತೆಯಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಗ್ರಾಮಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಆಗುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸ್ಟಾರ್ ಆಫ್ ದಿ ವೀಕ್ ಬಿರುದು ನೀಡುವ ಘೋಷಣೆ ಮಾಡಿದೆ. ಹೀಗೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಪಿಡಿಓ ಗಳಿಗೆ ಮುಂದೊಂದು ದಿನ ಉತ್ತಮ ಕಾರ್ಯಕ್ಕಾಗಿ ಸ್ಪೂರ್ತಿ ತುಂಬುವ ಬಿರುದು ನೀಡುವ ಪ್ರಕ್ರಿಯೆ ಶುರುವಾಗಬಹುದು.