ಕೌಲಾಲಂಪುರ: ಕಳೆದ ವರ್ಷವನ್ನು ಬಹುತೇಕ ನಿರಾಸೆಯಲ್ಲೇ ಮುಗಿಸಿದ ಭಾರತದ ಬ್ಯಾಡ್ಮಿಂಟನ್‌ಗೆ ನೂತನ ವರ್ಷಾರಂಭ ಕೂಡ ಹರುಷವನ್ನು ತಂದಿಲ್ಲ. 'ಮಲೇಶ್ಯ ಮಾಸ್ಟರ್ ಸೂಪರ್‌ 500′ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲಿ ತಾರಾ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಸೋಲು ಕಂಡಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ.