ಗುರುವಾರ, 09 ಜನವರಿ 2020
5:30 ಪೂರ್ವಾಹ್ನ
Daily PDF
ಕೇಂದ್ರ ಬಜೆಟ್ ಗೆ ದೇಶದ 130 ಕೋಟಿ ಭಾರತೀಯರ ಸಲಹೆ ಕೋರಿದ ಪ್ರಧಾನಿ ಮೋದಿ
Authored by:
Basavaraj Halli
ನವದೆಹಲಿ :ದೇಶದ ಆರ್ಥಿಕ ವೃದ್ಧಿ ದರ ಇಳಿಮುಖವಾಗಿದೆ. ಆರ್ಥಿಕತೆ ಸುಧಾರಣೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ಗೆ ಮುಂಚಿತವಾಗಿ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
130 ಭಾರತೀಯರ ಆಕಾಂಕ್ಷೆಗಳನ್ನು ಕೇಂದ್ರ ಬಜೆಟ್ ಪ್ರತಿನಿಧಿಸುತ್ತದೆ. ದೇಶದ ಅಭಿವೃದ್ಧಿಗೆ ಹಾದಿ ತೋರಿಸುತ್ತದೆ. ಈ ವರ್ಷದ ಬಜೆಟ್ ಗಾಗಿ ನಿಮ್ಮಲ್ಲಿರುವ ಯೋಜನೆಗಳು ಹಾಗೂ ಸಲಹೆಗಳನ್ನು ನೀಡುವಂತೆ ದೇಶದ ಜನರಿಗೆ ಆಹ್ವಾನ ನೀಡಿದ್ದಾರೆ. ಇದರೊಂದಿಗೆ ಸಲಹೆ ನೀಡುವಂತೆ ಮೈ ಗೌ ಇಂಡಿಯಾ ಟ್ವಿಟರ್ ಖಾತೆಯ ಲಿಂಕ್ ನ್ನು ಪ್ರಧಾನಿ ಹಂಚಿಕೊಂಡಿದ್ದಾರೆ