ಬುಧವಾರ, 08 ಜನವರಿ 2020
5:30 ಪೂರ್ವಾಹ್ನ
Daily PDF
30 ಮಾಧ್ಯಮಗಳಿಗೆ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ
Authored by:
Basavaraj Halli
ನವದೆಹಲಿ:ನಾಗರಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 30 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಮೊದಲ ಅಂತಾರಾಷ್ಟ್ರ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿದರು.
ಯೋಗದ ಕುರಿತು ದೇಶ ಮತ್ತು ವಿದೇಶಗಳಲ್ಲಿ ಜನರಿಗೆ ಹೆಚ್ಚು ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಈ ಗೌರವಗಳನ್ನು ನೀಡಲಾಯಿತು.
ಮುದ್ರಣ ಮಾದ್ಯಮಗಳಾದ ಉದಯವಾಣಿ ಬೆಂಗಳೂರು, ಒಡಿಶಾ ಎಕ್ಸ್‌ಪ್ರೆಸ್, ರೊಜ್ನಾಮಾ ರಾಷ್ಟ್ರೀಯ ಸಹಾರಾ ಹಾಗೂ ರೇಡಿಯೋಗಳಾದ ಫೀವರ್ 104 ಎಫ್‌ಎಂ, ಆಲ್ ಇಂಡಿಯಾ ರೇಡಿಯೋ ನವದೆಹಲಿ, ರೇಡಿಯೋ ಮಿಸ್ಟಿ 94.3 ನೇಪಾಳಿ ಮತ್ತು ರೇಡಿಯೋ ಮತ್ತು ಸಂದೇಶ್ ನ್ಯೂಸ್ ಗುಜರಾತಿ, ಅಮೃತಾ ಟೆಲಿವಿಷನ್ ಮಲಯಾಳಂ, ಡಿಡಿ ಕೇಂದ್ರ ಶ್ರೀನಗರ ನ್ಯೂಸ್ ದೆಹಲಿ, ಕೇಂದ್ರ ಉತ್ಪಾದನಾ ಕೇಂದ್ರ, ದೂರದರ್ಶನ ನವದೆಹಲಿ ಮತ್ತು ದೂರದರ್ಶನದ ಇತರರು ಈ ಪ್ರಶಸ್ತಿಗೆ ಭಾಜನರಾದರು.