ಬುಧವಾರ, 08 ಜನವರಿ 2020
5:30 ಪೂರ್ವಾಹ್ನ
Daily PDF
ಸೌರವ್ಯೂಹದ ಹೊರಗೆ ಭೂಮಿ ಗಾತ್ರದ ಗ್ರಹ ಪತ್ತೆ
Authored by:
Basavaraj Halli
ವಾಶಿಂಗ್ಟನ್, ಜ. 7: ತನ್ನ ಗ್ರಹ ಶೋಧಕ ಉಪಗ್ರಹ 'ಟಿಇಎಸ್‌ಎಸ್' ಸೌರವ್ಯೂಹದ ಹೊರಗೆ ಭೂಮಿ ಗಾತ್ರದ ಗ್ರಹವೊಂದನ್ನು ಪತ್ತೆಹಚ್ಚಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಹೇಳಿದೆ. ಈ ಗ್ರಹವು ತನ್ನ ಸೂರ್ಯನಿಂದ ಜೀವಿಗಳಿಗೆ ಪೂರಕವಾಗುವಷ್ಟು ಅಂತರದಲ್ಲಿದ್ದು, ಅಲ್ಲಿ ಜಲ ರೂಪದ ನೀರು ಇರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
ಹೊಸದಾಗಿ ಕಂಡುಹಿಡಿಯಲ್ಪಟ್ಟ ಗ್ರಹ 'ಟಿಒಐ 700 ಡಿ' ನಮ್ಮ ಭೂಮಿಯಿಂದ 100 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹವಾಯಿ ರಾಜಧಾನಿ ಹೊನೊಲುಲುನಲ್ಲಿ ನಡೆದ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿ ಘೋಷಿಸಿದೆ.