ಸೋಮವಾರ, 06 ಜನವರಿ 2020
5:30 ಪೂರ್ವಾಹ್ನ
Daily PDF
ಪರಮಾಣು ಒಪ್ಪಂದದಿಂದ ಇನ್ನಷ್ಟು ಹಿಂದಕ್ಕೆ: ಇರಾನ್
Authored by:
Basavaraj Halli
ಟೆಹರಾನ್ (ಎಎಫ್‌ಪಿ): ಆರು ಪ್ರಮುಖ ದೇಶಗಳ ಜತೆ ಮಾಡಿಕೊಂಡ 2015 ರ ಪರಮಾಣು ಒಪ್ಪಂದದಿಂದ ಇನ್ನಷ್ಟು ಹಿಂದೆ ಸರಿಯುವುದಾಗಿ ಇರಾನ್ ಭಾನುವಾರ ಹೇಳಿದೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಗಾವಲು ಸಂಸ್ಥೆ ಐಎಇಎ ಜತೆ ಸಹಕರಿಸುವುದಾಗಿ ಹೇಳಿದೆ.
ಒಪ್ಪಂದದಲ್ಲಿರುವ ನಿಯಮಗಳಿಗೆ ಯಾವುದೇ ಮಾನ್ಯತೆ ನೀಡುವುದಿಲ್ಲ ಎಂದು ಇರಾನ್ ಸರ್ಕಾರದ ವಕ್ತಾರರು ಹೇಳಿದ್ದಾರೆ.
Source: ಪ್ರಜಾವಾಣಿ ವಾರ್ತೆ