ಸೋಮವಾರ, 06 ಜನವರಿ 2020
5:30 ಪೂರ್ವಾಹ್ನ
Daily PDF
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ
Authored by:
Basavaraj Halli
ಲಖನೌ:ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರಗೊಂಡ ನಂತರ ಮೊದಲ ಬಾರಿಗೆ ಕಾಯ್ದೆ ಜಾರೊಳಿಸಲಿರುವ ರಾಜ್ಯ ಉತ್ತರ ಪ್ರದೇಶವಾಗಿರಲಿದೆ.
ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚನೆ ನೀಡಿದ್ದು ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿದ್ದ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿಯನ್ನು ತಯಾರಿಸುವಂತೆ ತಿಳಿಸಲಾಗಿದೆ.
ಈ ಬಗ್ಗೆ ಉತ್ತರ ಪ್ರದೇಶದ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಮಾತನಾಡಿದ್ದು, ಅಫ್ಘಾನಿಸ್ಥಾನದಿಂದ ಉತ್ತರ ಪ್ರದೇಶಕ್ಕೆ ಬಂದು ದಶಕಗಳಿಂದ ಪೌರತ್ವವಿಲ್ಲದೇ ಜೀವಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ, ಪಟ್ಟಿ ತಯಾರಿಸುವಿಕೆ ಸಿಎಎ ಜಾರಿಗೊಳಿಸುವುದಕ್ಕೆ ಮೊದಲ ಹೆಜ್ಜೆ.