* ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ರೈಲ್ವೆ ಅತಿ ಉದ್ದದ ಸರಕು ರೈಲು 'ವಾಸುಕಿ' ಹೊಸ ದಾಖಲೆ ನಿರ್ಮಿಸಿದೆ.
* ಈ ಸರಕು ಸಾಗಣೆ ರೈಲು 'ವಾಸುಕಿ' ಸುಮಾರು 3.5 ಕಿ.ಮೀ ಉದ್ದದ ಐದು ರೇಕ್ ಗಳನ್ನು ಒಂದೇ ಯುನಿಟ್ನ್ನಾಗಿ ಮಾಡಿಕೊಂಡು ಭಿಲಾಯ್ನಿಂದ ಕೊರ್ಬಾ ವರೆಗೆ 224 ಕಿ.ಮೀ ಸಂಚರಿಸುವ ಮೂಲಕ 'ವಾಸುಕಿ' ರೈಲು ಹೊಸ ಇತಿಹಾಸ ನಿರ್ಮಿಸಿದೆ.
* ಈ ರೈಲನ್ನು ಕಲ್ಲಿದ್ದಲು ಸಾಗಣೆ ಮಾಡಲು ಬಳಸಲಾಗುತ್ತಿದ್ದು ಮತ್ತು ಅತೀ ವೇಗವಾಗಿ ಸಂಚರಿಸುವ ರೈಲು ಇದಾಗಿದೆ.
* ವಾಸುಕಿ ರೈಲು ಸುಮಾರು 5 ಸರಕು ಸಾಗಣೆ ರೈಲಿಗೆ ಸರಿಸಮನಾಗುವ 300 ಬೋಗಿಗಳನ್ನು ಒಂದೇ ಬಾರಿಗೆ ಹೊತ್ತೊಯ್ದಿದ್ದು, ಒಬ್ಬನೇ ಪೈಲಟ್, ಓರ್ವ ಲೊಕೋ ಪೈಲಟ್ ಹಾಗೂ ಓರ್ವ ಗಾರ್ಡ್ ಇದರಲ್ಲಿದ್ದರು.
* ಸೂಪರ್ ಅನಕೊಂಡ ಎಂಬ ರೈಲು 2 ಕಿ.ಮೀ ಉದ್ದದ ಬೋಗಿಗಳಲ್ಲಿ ಸರಕುಗಳನ್ನು ಹೊತ್ತೊಯ್ದು, ಬಳಿಕ ಇತ್ತೀಚಿನ ಡಿಪಿಸಿಎ ತಂತ್ರಜ್ಞಾನ ಬಳಸಿ ಮೂರು ಸರಕು ರೈಲುಗಳನ್ನು ಜೊತೆ ಮಾಡಲಾಗಿದೆ.
ಹೊಸ ದಾಖಲೆ ನಿರ್ಮಿಸಿದ ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ರೈಲ್ವೆ ಅತಿ ಉದ್ದದ ಸರಕು ರೈಲು 'ವಾಸುಕಿ'
Published by
Savita Halli
17 ಆಗಸ್ಟ್ 2022