* ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ (NIOT) ನಿಂದ ಡೆಸಲಿನೇಶನ್ ಪ್ಲಾಂಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ,
* ಅದು ಲವಣಯುಕ್ತ ಅಥವಾ ಉಪ್ಪುಸಹಿತ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುತ್ತದೆ. ಈ ತಂತ್ರಜ್ಞಾನವನ್ನು ಲಕ್ಷದ್ವೀಪ ದ್ವೀಪಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ.
* * ಉಪ್ಪುನೀರಿನ ಘಟಕದ ಪ್ರಮುಖ ಲಕ್ಷಣಗಳು :
* ಲೋ ಟೆಂಪರೇಚರ್ ಥರ್ಮಲ್ ಡಿಸಲೈನೇಷನ್ (LTTD) ತಂತ್ರಜ್ಞಾನದ ಮೇಲೆ ಡಿಸಲಿನೇಶನ್ ಪ್ಲಾಂಟ್ ಆಧಾರಿತವಾಗಿದೆ.
* LTTD ತಂತ್ರಜ್ಞಾನವು ಉಪ್ಪು ಅಥವಾ ಲವಣಯುಕ್ತ ನೀರನ್ನು ಕುಡಿಯಲು ಯೋಗ್ಯವಾದ ಕುಡಿಯುವ ನೀರಾಗಿ ಪರಿವರ್ತಿಸುತ್ತದೆ.
* LTTD ತಂತ್ರಜ್ಞಾನವು ಲಕ್ಷದ್ವೀಪ ದ್ವೀಪಗಳಿಗೆ ಸೂಕ್ತವಾಗಿದೆ, ಏಕೆಂದರೆ ತಂತ್ರಜ್ಞಾನದ ಅಗತ್ಯವಿರುವಂತೆ ಸಮುದ್ರ ಮೇಲ್ಮೈ ನೀರು ಮತ್ತು ಆಳ ಸಮುದ್ರದ ನೀರಿನ ನಡುವೆ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ವ್ಯತ್ಯಾಸವಿದೆ.
ಕಡಿಮೆ ತಾಪಮಾನದ ಥರ್ಮಲ್ ಡಿಸಲೈನೇಷನ್ (LTTD) ತಂತ್ರಜ್ಞಾನ
Published by
Rukmini Krushna Ganiger
23 ಜುಲೈ 2022