* ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ 44ನೇ ಚೆಸ್ ಒಲಿಂಪಿಯಾಡ್ನ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ ನೀಡಿದರು.
* ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಜ್ಯೋತಿಯನ್ನು ಪ್ರಧಾನಿಗೆ ಹಸ್ತಾಂತರಿಸಿದರು, ಅವರು ಅದನ್ನು ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿದರು.
* ಜ್ಯೋತಿಯನ್ನು 40 ದಿನಗಳ ಅವಧಿಯಲ್ಲಿ 75 ನಗರಗಳಿಗೆ ಕೊಂಡೊಯ್ಯಲಾಗುತ್ತದೆ. ಪ್ರತಿ ಸ್ಥಳದಲ್ಲಿ, ರಾಜ್ಯದ ಚೆಸ್ ಗ್ರ್ಯಾಂಡ್ಮಾಸ್ಟರ್ಗಳು ಜ್ಯೋತಿಯನ್ನು ಸ್ವೀಕರಿಸುತ್ತಾರೆ.
*ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಕ್ರೀಡಾ ಜ್ಯೋತಿ ರಿಲೇಯ ಹೊಸ ಸಂಪ್ರದಾಯದ ಪ್ರಾರಂಭದ ಉಪಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು, ಇದು ಪ್ರಪಂಚದಾದ್ಯಂತ ಈ ಆಟವನ್ನು ಜನಪ್ರಿಯಗೊಳಿಸಲಿದೆ ಮತ್ತು ಉತ್ತೇಜಿಸಲಿದೆ.
* “ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಗಾಗಿ ಮತ್ತು ನಮ್ಮನ್ನು ಗೌರವಿಸಿದ್ದಕ್ಕಾಗಿ ಫಿಡೆ ಅವರಿಗೆ ಕೃತಜ್ಞರಾಗಿರಬೇಕು” ಎಂದು ಅವರು ಹೇಳಿದರು
* “ಭಾರತವು ಇಂದು ವೇಗವಾಗಿ ಬೆಳೆಯುತ್ತಿರುವ ಚೆಸ್ ದೇಶವಾಗಿದೆ
* “ಇಂದು ಚೆಸ್ ಒಲಿಂಪಿಯಾಡ್ ಕ್ರೀಡಾಕೂಟದ ಮೊದಲ ಕ್ರೀಡಾ ಜ್ಯೋತಿ ರಿಲೇ ಭಾರತದಿಂದ ಪ್ರಾರಂಭವಾಗುತ್ತಿದೆ. ಮೊದಲ ಬಾರಿಗೆ, ಈ ವರ್ಷ ಭಾರತವು ಚೆಸ್ ಒಲಿಂಪಿಯಾಡ್ ಆಟಗಳನ್ನು ಆಯೋಜಿಸಲಿದೆ.
* ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಚೆಸ್ ಒಲಿಂಪಿಯಾಡ್ ಜ್ಯೋತಿಯು ದೇಶದ 75 ನಗರಗಳಿಗೆ ಹೋಗಲಿದೆ” ಎಂದೂ ಅವರು ಹೇಳಿದರು “ಪ್ರತಿ ಚೆಸ್ ಒಲಿಂಪಿಯಾಡ್ ಆಟಕ್ಕೆ ಕ್ರೀಡಾ ಜ್ಯೋತಿ ರಿಲೇ ಭಾರತದಿಂದಲೇ ಪ್ರಾರಂಭವಾಗಲಿದೆ ಎಂಬುದಾಗಿ ಫಿಡೆ ನಿರ್ಧರಿಸಿದೆ.
* "ನಮ್ಮ ಪೂರ್ವಜರು ವಿಶ್ಲೇಷಣಾತ್ಮಕ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮಿದುಳುಗಳಿಗಾಗಿ ಚದುರಂಗ ಅಥವಾ ಚೆಸ್ನಂತಹ ಆಟಗಳನ್ನು ಕಂಡುಹಿಡಿದರು.
* " ಚದುರಂಗದ ಪ್ರತಿಯೊಂದು ತುಣುಕಿನಂತೆಯೇ ಅದು ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಅನನ್ಯ ಸಾಮರ್ಥ್ಯವನ್ನು ಹೊಂದಿದೆ.
* “ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ದೇಶದ ಯುವಕರಲ್ಲಿ ಧೈರ್ಯ, ಸಮರ್ಪಣಾ ಮನೋಭಾವ, ಶಕ್ತಿಗೂ ಕೊರತೆಯಿಲ್ಲ. ಮೊದಲು ನಮ್ಮ ಈ ಯುವಕರು ಸರಿಯಾದ ವೇದಿಕೆಗಾಗಿ ಕಾಯಬೇಕಿತ್ತು.
* ಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ದೇಶ ನೋಡುತ್ತಿದೆ ಎಂದರು. ಆಟದಲ್ಲಿ ಗೆಲುವು ಅದರ ಭಾಗವಾಗಿರುವಂತೆಯೇ, ಗೆಲುವು ಸಾಧಿಸಲು ನಡೆಸುವ ತಯಾರಿಯೂ ಕೂಡಾ ಆಟದ ಭಾಗವಾಗಿದೆ ಎಂದವರು ನುಡಿದರು.
* 44 ನೇ ಚೆಸ್ ಒಲಿಂಪಿಯಾಡ್ 2022ರ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. 1927 ರಿಂದ ಆಯೋಜಿಸಲಾಗುತ್ತಿರುವ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು 30 ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ.
* 189 ದೇಶಗಳು ಭಾಗವಹಿಸುವ ಮೂಲಕ, ಇದು ಹಿಂದಿನ ಚೆಸ್ ಒಲಿಂಪಿಯಾಡ್ಗಳಿಗೆ ಹೋಲಿಸಿದರೆ ಅತಿ ದೊಡ್ಡ ಸಂಖ್ಯೆಯಲ್ಲಿ ದೇಶಗಳು ಪಾಲ್ಗೊಳ್ಳುತ್ತಿರುವ ಒಲಿಂಪಿಯಾಡ್ ಆಗಲಿದೆ.
44 ನೇ ಚೆಸ್ ಒಲಿಂಪಿಯಾಡ್ನ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ
Published by
Rukmini Krushna Ganiger
20 ಜೂನ್ 2022