* ಬೇಸಿಗೆ ರಜೆಯ ನಂತರ ಶಾಲೆಗಳು ಪುನರಾರಂಭವಾಗುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರಾಜ್ಯದಲ್ಲಿ "ಎನ್ನಮ್ ಎಝುತುಮ್ ಯೋಜನೆ" ಯನ್ನು ಪ್ರಾರಂಭಿಸಿದರು.
* COVID-19 ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾದ 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ನಡುವಿನ ಕಲಿಕೆಯ ಅಂತರವನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
* ತಿರುವಳ್ಳೂರಿನ ಅಜಿಂಜಿವಕ್ಕಂ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
* ಈ ಬಿಡುಗಡೆಗೂ ಮುನ್ನ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಿ ಕೈಪಿಡಿಗಳನ್ನು ವಿತರಿಸಲಾಯಿತು
* ಈ ಕಲಿಕೆಯ ಅಂತರವನ್ನು ಸಾಮಾನ್ಯ ತರಗತಿಗಳಿಂದ ಮಾತ್ರ ನಿವಾರಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರತಿ ಮಗುವಿಗೆ ಪ್ರತ್ಯೇಕವಾಗಿ ಸಹಾಯ ಮಾಡುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
* ಯೋಜನೆಯ ಅಡಿಯಲ್ಲಿ, ಮಕ್ಕಳಿಗೆ ತಮಿಳು, ಇಂಗ್ಲಿಷ್ ಮತ್ತು ಗಣಿತ ಎಂಬ ಮೂರು ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.
* ಈ ಯೋಜನೆಯು ತರಗತಿಯ ಕೋಣೆಯನ್ನು ಪಾಠಗಳನ್ನು ನಡೆಸಲು ಸೂಕ್ತವಾಗಿಸಲು ಪ್ರಯತ್ನಿಸುತ್ತದೆ. ಈ ಪಾಠಗಳನ್ನು ನೃತ್ಯ, ಹಾಡುಗಳು, ಬೊಂಬೆಯಾಟ ಮತ್ತು ಕಥೆ ಹೇಳುವ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ.
* ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಉಪಹಾರ ಯೋಜನೆ ಹಾಗೂ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶ ಯೋಜನೆಯನ್ನು ಘೋಷಿಸಿದರು. ಇದಲ್ಲದೆ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ರೂ 1,000 ಪ್ರೋತ್ಸಾಹ ಧನವನ್ನು ಘೋಷಿಸಲಾಯಿತು.
ತಮಿಳುನಾಡು ಮುಖ್ಯಮಂತ್ರಿ ‘ಎನ್ನಮ್ ಎಳುತುಂ’ ಯೋಜನೆ ಪ್ರಾರಂಭಿಸಿದರು
Published by
Rukmini Krushna Ganiger
18 ಜೂನ್ 2022