* ಜೂನ್ 7, 2022 ರಂದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಮಹಾತ್ಮಾ ಗಾಂಧಿ ಸೇತುವಿನ ಸೂಪರ್ ಸ್ಟ್ರಕ್ಚರ್ ಬದಲಿಯನ್ನು ಉದ್ಘಾಟಿಸಿದರು.
* ಕೇಂದ್ರ ಸಚಿವರು ಹಾಜಿಪುರ ಮತ್ತು ಪಾಟ್ನಾದಲ್ಲಿ 15 ರಾಷ್ಟ್ರೀಯ ಹೆದ್ದಾರಿ (NH) ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.
* 1,192 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ “NH-85 ರ ಛಪ್ರಾ - ಗೋಪಾಲ್ಗಂಜ್ ವಿಭಾಗ” ವನ್ನು ಸಚಿವರು ಉದ್ಘಾಟಿಸಿದರು.
* ಈ ಸೇತುವೆಯು ಬಿಹಾರದ ಜೀವನಾಡಿಯಾಗಿದ್ದು, ಉತ್ತರ ಬಿಹಾರವನ್ನು ದಕ್ಷಿಣ ಬಿಹಾರದೊಂದಿಗೆ ಸಂಪರ್ಕಿಸುತ್ತದೆ.
* ಮಹಾತ್ಮ ಗಾಂಧಿ ಸೇತುವೆ ಇದು ಪಟ್ನಾದಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾದ ನಾಲ್ಕು ಪಥದ ಸೇತುವೆಯಾಗಿದೆ.
* ಇದನ್ನು ಬಿಹಾರ ಸರ್ಕಾರವು 1980 ರ ದಶಕದಲ್ಲಿ ನಿರ್ಮಿಸಿತು ಮತ್ತು ಮೇ 1982 ರಲ್ಲಿ ಉದ್ಘಾಟಿಸಲಾಯಿತು.
* ಇದರ ಒಟ್ಟು ಉದ್ದ 5,750 ಮೀಟರ್, ಇದು ಭಾರತದ ಮೂರನೇ ಅತಿ ಉದ್ದದ ನದಿ ಸೇತುವೆಯಾಗಿದೆ. ಇದು 1982 ರಿಂದ 2017 ರ ನಡುವೆ ಭಾರತದ ಅತಿ ಉದ್ದದ ನದಿ ಸೇತುವೆಯಾಗಿ ಉಳಿದಿದೆ. ಇದನ್ನು ಮೇ 1982 ರಲ್ಲಿ ಉದ್ಘಾಟಿಸಲಾಯಿತು. ಇದನ್ನು ಹತ್ತು ವರ್ಷಗಳಲ್ಲಿ ಗ್ಯಾಮನ್ ಇಂಡಿಯಾ ಲಿಮಿಟೆಡ್ ನಿರ್ಮಿಸಿದೆ.
ಬಿಹಾರ ಮಹಾತ್ಮಾ ಗಾಂಧಿ ಸೇತುವೆ
Published by
Rukmini Krushna Ganiger
11 ಜೂನ್ 2022