* ಖ್ಯಾತ ಸಂತೂರ್ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಭಜನ್ ಸೊಪೋರಿ (74) ರವರು ದಿನಾಂಕ : 02/06/2022 ರಂದು ನಿಧನರಾಗಿದ್ದಾರೆ.
* 1992 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2004ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಜೀವಮಾನ ಸಾಧನೆ ಪ್ರಶಸ್ತಿಗೆ ಪಂಡಿತ್ ಭಜನ್ ಪಾತ್ರರಾಗಿದ್ದರು.
* 1948 ರಲ್ಲಿ ಜನಿಸಿದ್ದ ಭಜನ್​ ಮೂಲತಃ ಕಾಶ್ಮೀರದ ಸೊಪೋರಿ ಕಣಿವೆ ಅವರಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾಣೆ ಪರಂಪರೆಗೆ ಸೇರಿದ್ದರು.
* 1953 ರಲ್ಲಿ ತಮ್ಮ ಐದನೇ ವರ್ಷದ ವಯಸ್ಸಿನಲ್ಲೇ ಮೊದಲ ಪ್ರರ್ದಶನವನ್ನು ನೀಡಿದ್ದರು.ದಶಕಗಳ ಕಾಲ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪಂಡಿತ್​ ಭಜನ್​, ಈಜಿಪ್ಟ್, ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕದಲ್ಲೂ ತಮ್ಮ ಕಛೇರಿ ನಡೆಸಿದ್ದರು. ಅಜ್ಜ ಎಸ್.​ಸಿ.ಸೊಪೋರಿ ಮತ್ತು ತಂದೆ ಶಂಭೂನಾಥ್ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತಿದ್ದ ಅವರು, ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು.