* ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಜೂನ್ 02 ರಂದು (ಭಾನುವಾರ) ಬೆಳಗ್ಗೆ ಬೆಳಗ್ಗೆ 6:23ಕ್ಕೆ ಚಂದ್ರನ ದೂರದ ಭಾಗದ ಮೇಲೆ ಇಳಿದಿದೆ
* ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಭೂಪ್ರದೇಶದಲ್ಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ತಿಳಿಸಿದೆ.
* ಚೀನಾದ ಬಾಹ್ಯಾಕಾಶ ಸಂಸ್ಥೆಯಾದ ಚೈನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (CNSA) ಯೋಜನೆ ಯಶಸ್ವಿಯಾಗಿದೆ ಎಂದು ಘೋಷಿಸಿದೆ.
* ಚಾಂಗ್ಇ 6 ಯೋಜನೆಗೆ ಚೀನೀಯರ ನಂಬಿಕೆಯಂತೆ ಚಂದ್ರ ದೇವಿಯಾದ ಚಾಂಗ್'ಇ ಹೆಸರನ್ನೇ ಇಡಲಾಗಿದೆ. ಚಾಂಗ್'ಇ-6 ಮೇ 3ರಂದು ಹೈನಾನ್ ಪ್ರದೇಶದ ವೆನ್‌ಚಾಂಗ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಗಿದೆ.
* ಚಂದ್ರನ ಮೇಲ್ಮೈಯಲ್ಲಿ ಅಡೆತಡೆಗಳನ್ನು ಪತ್ತೆಹಚ್ಚಲು ಲೇಸರ್ 3 ಡಿ ಸ್ಕ್ಯಾನರ್ ಬಳಸಿ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶದಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಹಾರಾಡುತ್ತ ನಿಧಾನವಾಗಿ ಲಂಬವಾಗಿ ಇಳಿಯುವ ಮೊದಲು ಅಂತಿಮ ಲ್ಯಾಂಡಿಂಗ್ ಸೈಟ್ ಅನ್ನು ಆಯ್ಕೆ ಮಾಡಲು ಪ್ರಯತ್ನಿಸಿತು.
ಬುಧವಾರ, 05 ಜೂನ್ 2024
1:42 ಅಪರಾಹ್ನ
Daily PDF
ಚಂದ್ರನಲ್ಲಿ ಇಳಿದ ಚೀನಾದ ಚಾಂಗ್'ಇ-6 ನೌಕೆ
Authored by:
Bhagya R K