* ಚಂದಿರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸಿದ ಯಶಸ್ಸಿನಿಂದ್ ಇಸ್ರೋ ಮತ್ತೊಮ್ಮೆ ಅಲ್ಲಿಂದ ಮಾದರಿಗಳನ್ನು ಮರಳಿ ಭೂಮಿಗೆ ತರುವ ಕಾರ್ಯಕ್ರಮವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-4 ಯೋಜನೆಗೆ ಸಜ್ಜಾಗಿದೆ.
* ಈ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಅಂತರಿಕ್ಷದಲ್ಲಿ ಗಗನನೌಕೆಗಳು ಪರಸ್ಪರ ಸಂಧಿಸುವ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ವರ್ಷಾಂತ್ಯಕ್ಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಜೂನ್ 26 ರಂದು (ಬುಧವಾರ) ತಿಳಿಸಿದ್ದಾರೆ.
* ಇಸ್ರೋ ಚಂದ್ರನ ಮೇಲ್ಮೈನಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಗುರಿಯನ್ನು ಹೊಂದಿದೆ.
* 2027 ರ ವೇಳೆಗೆ 'ಚಂದ್ರಯಾನ -4' ಗಗನನೌಕೆ ಉಡ್ಡಯನಕ್ಕೆ ಪೂರ್ವಭಾವಿಯಾಗಿ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗುರುವಾರ, 27 ಜೂನ್ 2024
4:12 ಅಪರಾಹ್ನ
Daily PDF
ಚಂದ್ರನ ಅಂಗಳದಲ್ಲಿನ ಮಾದರಿಗಳನ್ನು ತರಲು ಇಸ್ರೋ ಸಿದ್ಧತೆ
Authored by:
Bhagya R K