* ಇಟಲಿಯ ಟ್ಯುರಿನ್‌ನಲ್ಲಿ ನಡೆದ ಚಳಿಗಾಲದ ವಿಶ್ವ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕೊನೆಯ ದಿನದಲ್ಲಿನ ನಾಲ್ಕು ಸ್ಪರ್ಧೆಗಳಲ್ಲಿ 12 ಪದಕಗಳನ್ನು ಜಯಿಸಿತು. ಈ ಮೂಲಕ ಕೂಟದಲ್ಲಿ ಒಟ್ಟು 33 ಪದಕಗಳ ಬೇಟೆಯೊಂದಿಗೆ ಸ್ಪರ್ಧೆಯನ್ನು ಕೊನೆಗೊಳಿಸಿದೆ.
* ಭಾರತ ಕೂಟದಲ್ಲಿ ಒಟ್ಟು 8 ಚಿನ್ನದ ಪದಕ, 18 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ಜಯಿಸಿದೆ. ಮಾರ್ಚ್ 8ರಿಂದ ನಡೆದ ಕೂಟದಲ್ಲಿ 100 ದೇಶಗಳಿಂದ 1500ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಿದ್ದರು.
* ಭಾರತ ತಂಡವು ಸ್ನೋ ಶೂಯಿಂಗ್ ಮತ್ತು ಆಲ್ಪೈನ್ ಸ್ಕೀಯಿಂಗ್‌ನಲ್ಲಿ ತಲಾ 10 ಪದಕ, ಸ್ನೋ ಬೋರ್ಡಿಂಗ್‌ನಲ್ಲಿ ಆರು ಪದಕ, ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್‌ನಲ್ಲಿ ನಾಲ್ಕು, ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನಲ್ಲಿ ಎರಡು ಹಾಗೂ ಫ್ಲೋರ್‌ಬಾಲ್‌ನಲ್ಲಿ ಒಂದು ಪದಕ ಗೆದ್ದಿತು.
* 25 ಮೀಟರ್ ಸ್ನೋ ಶೂಯಿಂಗ್‌ನಲ್ಲಿ ವಾಸು ತಿವಾರಿ, ಶಾಲಿನಿ ಚೌಹಾಣ್ ಮತ್ತು ತಾನ್ಯಾ ತಲಾ ಬೆಳ್ಳಿ ಪದಕ ಗೆದ್ದರೆ, ಅದೇ ವಿಭಾಗದಲ್ಲಿ ಜಹಾಂಗೀರ್ ಕಂಚಿನ ಪದಕ ಜಯಿಸಿದರು.
* ಆಲ್ಪೈನ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟುಗಳು ಮೆರಗು ಪ್ರದರ್ಶಿಸಿದರು. ರಾಧಾ ದೇವಿ ಮತ್ತು ನಿರ್ಮಲಾ ದೇವಿ ಅವರು ಇಂಟರ್‌ಮಿಡಿಯೆಟ್ ಸ್ಲಾಲೋಮ್‌ನಲ್ಲಿ (ಎಫ್ 01 ಮತ್ತು ಎಫ್ 04) ಬೆಳ್ಳಿ ಪದಕ ಜಯಿಸಿದರು. ನೊವೈಸ್ ಸ್ಲಾಲೋಮ್ (ಎಂ 02) ವಿಭಾಗದಲ್ಲಿ ಅಭಿಷೇಕ್ ಕುಮಾರ್ ಕೂಡಾ ಬೆಳ್ಳಿ ಪದಕ ಪಡೆದರು.
* ಆಕೃತಿ ಅವರು ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನ 100 ಮೀಟರ್ ಕ್ಲಾಸಿಕಲ್ ಟೆಕ್ನಿಕ್‌ನಲ್ಲಿ (ಎಫ್ 02) ಕಂಚಿನ ಪದಕ ಗಳಿಸಿದರು. ಫ್ಲೋರ್‌ಬಾಲ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡ ತನ್ನ ಕೌಶಲ್ಯ ತೋರ್ಪಡಿಸಿ ಕಂಚು ಸಾಧಿಸಿದೆ.
ಸೋಮವಾರ, 17 ಮಾರ್ಚ್ 2025
1:35 ಅಪರಾಹ್ನ
Daily PDF
ಚಳಿಗಾಲದ ವಿಶ್ವ ವಿಶೇಷ ಒಲಿಂಪಿಕ್ಸ್ದಲ್ಲಿ ಭಾರತದ 33 ಪದಕಗಳ ಸಾಧನೆ!
Authored by:
Jyoti Angadi