* ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಶೀಘ್ರದಲ್ಲೇ ಲೋಕಾರ್ಪಣೆಯಾಗುತ್ತಿದೆ.
* ಸುಮಾರು 6,50,000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ.
* 2023ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಭಾರತದಲ್ಲೇ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು.ಇದರ ಬೋಧನಾ ಆಸ್ಪತ್ರೆ ಈ ನವೆಂಬರ್‌ನಲ್ಲಿ 600 ಹಾಸಿಗೆಗಳ ಅತ್ಯಾಧುನಿಕ ಉಚಿತ ಆಸ್ಪತ್ರೆಯಾಗಿ ವಿಸ್ತರಿಸಲ್ಪಡುತ್ತಿದೆ.
* ಆಸ್ಪತ್ರೆಯಲ್ಲಿ 100 ಐಸಿಯು ಬೆಡ್‌ಗಳು, 11 ಆಪರೇಷನ್ ಥಿಯೇಟರ್‌ಗಳು ಇದ್ದು, ಯಾವುದೇ ಬಿಲ್ಲಿಂಗ್ ಕೌಂಟರ್ ಇಲ್ಲ. ಸಂಪೂರ್ಣ ಉಚಿತವಾಗಿ ಆರೋಗ್ಯ ಸೇವೆ ದೊರೆಯಲಿದೆ.
* ಆಸ್ಪತ್ರೆಯ ಗೋಪುರದ ಮೇಲೆ 20 ಅಡಿ ಎತ್ತರದ ಶ್ರೀ ಧನ್ವಂತರಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಇದು ಕೇವಲ ಆಸ್ಪತ್ರೆಯಲ್ಲ, ಮಾನವೀಯತೆಗೆ ನೀಡಿದ "ಆರೋಗ್ಯವೇ ಹಕ್ಕು" ಎಂಬ ಭರವಸೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಲೋಕಾರ್ಪಣೆಗೆ ಸಿದ್ಧ
Published by Jyoti Angadi
25 ಆಗಸ್ಟ್ 2025