* ಭಾರತ ಸರಕಾರವು ಚೀನಾ ಮೂಲದ 100ಕ್ಕೂ ಅಧಿಕ ಚೀನೀ ವೆಬ್‌ಸೈಟ್ ಗಳನ್ನು ನಿರ್ಬಂಧಿಸಲು ಮುಂದಾಗಿದೆ.
* ಹೂಡಿಕೆ ಸಂಬಂಧಿತ ವಂಚನೆಗಳಿಗಾಗಿ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ 100ಕ್ಕೂ ಹೆಚ್ಚು ಚೀನೀ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.
* ಚೀನಾ ನಡೆಸುವ ಹಣಕಾಸು ವಂಚನೆ ತಡೆಯಲು ಭಾರತ ಸರಕಾರವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಉದ್ದೇಶದಿಂದ ಕಳೆದ ಕೆಲ ವರ್ಷಗಳಲ್ಲಿ ಸುಮಾರು 250 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆದೇಶಿಸಿದೆ.
* ಈ ಪೈಕಿ, TikTok, Xender, Shein, Camscanner ಸೇರಿದಂತೆ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು ಮತ್ತು ಲಕ್ಷಾಂತರ ಡೌನ್‌ಲೋಡ್‌ಗಳನ್ನು ಹೊಂದಿದ್ದವು.ಈ ಅಪ್ಲಿಕೇಶನ್‌ಗಳು ಸೂಕ್ಷ್ಮ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿವೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಚೀನಾದಲ್ಲಿರುವ ಸರ್ವರ್‌ಗಳು ಈ ಡೇಟಾ ಸ್ವೀಕರಿಸುತ್ತಿದ್ದಾರೆ ಮತ್ತು ಬಳಸುತ್ತಿದ್ದಾರೆ ಎಂದೂ ಹೇಳಲಾಗುತ್ತದೆ.
* PUBG ಮೊಬೈಲ್‌ನ ಭಾರತೀಯ ಆವೃತ್ತಿ BGMI ಅಥವಾ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು Google Play ಸ್ಟೋರ್ ಮತ್ತು Apple App ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
ಗುರುವಾರ, 07 ಡಿಸೆಂಬರ್ 2023
8:56 ಅಪರಾಹ್ನ
Daily PDF
ಚೀನಾ ಮೂಲದ 100ಕ್ಕೂ ಅಧಿಕ ವೆಬ್‌ಸೈಟ್ ನಿಷೇಧ
Authored by:
Bhagya R K