➤ ದೇಶದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆ (RTI - Right to Information Act, 2005) ಅಡಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC - Central Information Commission) ಐತಿಹಾಸಿಕ ತೀರ್ಪು ನೀಡಿದೆ.
ಮೇ 18, 2026 ರಂದು ಕೇಂದ್ರ ಮಾಹಿತಿ ಆಯುಕ್ತರಾದ ಪಿ. ಆರ್. ರಮೇಶ್ ಅವರು ಈ ಆದೇಶವನ್ನು ಹೊರಡಿಸಿದ್ದು, 2018 ರಲ್ಲಿದ್ದ ಹಳೆಯ ಆದೇಶವನ್ನು ಬದಲಾಯಿಸಿದ್ದಾರೆ.
➤ 2018 ರಲ್ಲಿ ಅಂದಿನ ಮಾಹಿತಿ ಆಯುಕ್ತರಾಗಿದ್ದ ಎಂ. ಶ್ರೀಧರ್ ಆಚಾರ್ಯುಲು ಅವರು, ಬಿಸಿಸಿಐ ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು, ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಿದ್ದರು. ಆದರೆ, ಇದನ್ನು ಬಿಸಿಸಿಐ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸೆಪ್ಟೆಂಬರ್ 2025 ರಲ್ಲಿ ಮದ್ರಾಸ್ ಹೈಕೋರ್ಟ್ ಈ ಪ್ರಕರಣವನ್ನು ಮರುಪರಿಶೀಲಿಸುವಂತೆ ಸಿಐಸಿಗೆ ಸೂಚಿಸಿತ್ತು. ಈಗ ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನು ಆಧರಿಸಿ ಸಿಐಸಿ ಬಿಸಿಸಿಐ ಪರವಾಗಿ ಹೊಸ ಆದೇಶ ನೀಡಿದೆ.
➤ ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬಾರದಿರಲು ಪ್ರಮುಖ ಕಾರಣ: ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(h) ಪ್ರಕಾರ, ಒಂದು ಸಂಸ್ಥೆಯನ್ನು 'ಸಾರ್ವಜನಿಕ ಪ್ರಾಧಿಕಾರ' (Public Authority) ಎಂದು ಕರೆಯಬೇಕಾದರೆ ಅದು ಸರ್ಕಾರದ ನಿಯಂತ್ರಣ ಅಥವಾ ಧನಸಹಾಯ ಹೊಂದಿರಬೇಕು. ಆದರೆ ಬಿಸಿಸಿಐ ಈ ಕೆಳಗಿನ ಕಾರಣಗಳಿಂದಾಗಿ ಆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಐಸಿ ಸ್ಪಷ್ಟಪಡಿಸಿದೆ:
- ಸ್ವಾಯತ್ತ ಖಾಸಗಿ ಸಂಸ್ಥೆ: ಬಿಸಿಸಿಐ ತಮಿಳುನಾಡು ಸಂಘಗಳ ನೋಂದಣಿ ಕಾಯ್ದೆಯಡಿ (Tamil Nadu Societies Registration Act) ನೋಂದಾಯಿಸಲ್ಪಟ್ಟ ಒಂದು ಖಾಸಗಿ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಸಂವಿಧಾನದ ಮೂಲಕವಾಗಲಿ ಅಥವಾ ಸಂಸತ್ತಿನ ಕಾನೂನಿನ ಮೂಲಕವಾಗಲಿ ರಚನೆಯಾಗಿಲ್ಲ.
- ಸರ್ಕಾರದ ಹಣಕಾಸು ನೆರವು ಇಲ್ಲ: ಬಿಸಿಸಿಐ ತನ್ನ ಆದಾಯವನ್ನು ಪ್ರಸಾರ ಹಕ್ಕುಗಳು (Media Rights), ಐಪಿಎಲ್ (IPL), ಪ್ರಾಯೋಜಕತ್ವ (Sponsorship) ಮತ್ತು ಟಿಕೆಟ್ ಮಾರಾಟದ ಮೂಲಕ ಸ್ವತಂತ್ರವಾಗಿ ಗಳಿಸುತ್ತದೆ. ಸರ್ಕಾರದಿಂದ ಯಾವುದೇ ಆರ್ಥಿಕ ಧನಸಹಾಯ ಪಡೆಯುವುದಿಲ್ಲ.
- ತೆರಿಗೆ ವಿನಾಯಿತಿ ಅಂದರೆ ಧನಸಹಾಯವಲ್ಲ: ಬಿಸಿಸಿಐ ಕ್ರೀಡಾ ಸಂಸ್ಥೆಯಾಗಿ ಪಡೆಯುವ ಆದಾಯ ತೆರಿಗೆ ವಿನಾಯಿತಿಗಳನ್ನು ಸರ್ಕಾರದ "ಗಣನೀಯ ಧನಸಹಾಯ" (Substantive Financing) ಎಂದು ಪರಿಗಣಿಸಲು ಸಾಧ್ಯವಿಲ್ಲ.
- ಸರ್ಕಾರದ ನೇರ ನಿಯಂತ್ರಣವಿಲ್ಲ: ಬಿಸಿಸಿಐನ ದೈನಂದಿನ ಆಡಳಿತ, ಅಧಿಕಾರಿಗಳ ನೇಮಕಾತಿ ಅಥವಾ ಆಂತರಿಕ ನಿರ್ಧಾರಗಳಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಅಥವಾ ನಿಯಂತ್ರಣ ಇರುವುದಿಲ್ಲ.
➤ ಕ್ರಿಕೆಟ್ ಆಡಳಿತದ ಮೇಲಾಗುವ ಪರಿಣಾಮ:
- ಮಾಹಿತಿ ನೀಡುವ ಕಡ್ಡಾಯವಿಲ್ಲ: ಸಾರ್ವಜನಿಕರು ಇನ್ಮುಂದೆ ಬಿಸಿಸಿಐಗೆ ಆರ್‌ಟಿಐ ಅರ್ಜಿ ಸಲ್ಲಿಸಿ ಆಟಗಾರರ ಆಯ್ಕೆ ಪ್ರಕ್ರಿಯೆ, ಆಂತರಿಕ ವೆಚ್ಚಗಳು ಅಥವಾ ಒಪ್ಪಂದಗಳ ಬಗ್ಗೆ ಮಾಹಿತಿ ಕೇಳಲು ಸಾಧ್ಯವಿಲ್ಲ.
- ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025:ಇತ್ತೀಚೆಗೆ ತರಲಾದ ಈ ಕಾಯ್ದೆಯು ಕೇವಲ ಸರ್ಕಾರಿ ಅನುದಾನ ಪಡೆಯುವ ಕ್ರೀಡಾ ಸಂಸ್ಥೆಗಳಿಗೆ ಮಾತ್ರ ಆರ್‌ಟಿಐ ಅನ್ವಯಿಸುತ್ತದೆ ಎಂದು ಹೇಳುತ್ತದೆ. ಬಿಸಿಸಿಐ ಅನುದಾನ ಪಡೆಯದ ಕಾರಣ ಇದರಲ್ಲಿಯೂ ವಿನಾಯಿತಿ ಪಡೆದಿದೆ.
ಏಪ್ರಿಲ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಮಂಗಳವಾರ, 19 ಮೇ 2026
3:15 ಅಪರಾಹ್ನ
Daily PDF
BCCIಗೆ ಬಿಗ್ ರಿಲೀಫ್: ಇನ್ಮುಂದೆ ಕ್ರಿಕೆಟ್ ಮಂಡಳಿ RTI ವ್ಯಾಪ್ತಿಗೆ ಬರಲ್ಲ! CIC ಐತಿಹಾಸಿಕ ತೀರ್ಪು
Authored by:
Akshata Halli