➤ ಹೊಸ ಕಾನೂನು: ಚೀನಾದಲ್ಲಿರುವ 56 ಜನಾಂಗೀಯ ಸಮೂಹಗಳಲ್ಲಿ ‘ಒಂದೇ ರಾಷ್ಟ್ರೀಯ ಗುರುತು’ ಮೂಡಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಚೀನಾದಲ್ಲಿ ಶೇ. 90ಕ್ಕಿಂತ ಹೆಚ್ಚು ಜನ ‘ಹಾನ್’ (Han) ಜನಾಂಗಕ್ಕೆ ಸೇರಿದವರಾಗಿದ್ದು, ಉಯ್ಘರ್, ಟಿಬೆಟಿಯನ್ ಮತ್ತು ಮಂಗೋಲ್ ಮುಂತಾದವರು ಅಲ್ಪಸಂಖ್ಯಾತರಾಗಿದ್ದಾರೆ. ಇನ್ನು ಮುಂದೆ ಶಿಕ್ಷಣ, ಆಡಳಿತ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ‘ರಾಷ್ಟ್ರೀಯ ಏಕತೆ’ ಪಾಲಿಸುವುದು ಕಡ್ಡಾಯವಾಗಿದೆ.
➤ ಕಾಯಿದೆಯ ಪ್ರಮುಖ ನಿಯಮಗಳು:
- ಕಡ್ಡಾಯ ಮ್ಯಾಂಡರಿನ್ ಭಾಷೆ: ಶಾಲೆ ಮತ್ತು ಸರಕಾರಿ ಕಚೇರಿಗಳಲ್ಲಿ ಚೀನಾದ ಅಧಿಕೃತ ಭಾಷೆಯಾದ 'ಮ್ಯಾಂಡರಿನ್' ಕಡ್ಡಾಯ.
- ಕಮ್ಯುನಿಸ್ಟ್ ಪಕ್ಷಕ್ಕೆ ಬೆಂಬಲ: ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಚೀನಾ ದೇಶ ಮತ್ತು ಅಲ್ಲಿನ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ಶಿಕ್ಷಣ ನೀಡಬೇಕು.
- ಸಾಂಸ್ಕೃತಿಕ ನಿಯಂತ್ರಣ: ಗ್ರಂಥಾಲಯ ಹಾಗೂ ಮ್ಯೂಸಿಯಂಗಳು ಕೇವಲ ಚೀನಾದ ಇತಿಹಾಸ ಮತ್ತು ಏಕತೆಯನ್ನು ಮಾತ್ರ ಬಿಂಬಿಸಬೇಕು.
- ಕಠಿಣ ಕ್ರಮ: ಪ್ರತ್ಯೇಕತಾವಾದ ಅಥವಾ ದೇಶದ ಏಕತೆಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ.
➤ ವಿದೇಶಗಳಿಗೂ ಅನ್ವಯ: ಚೀನಾದ ಹೊರಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಚೀನಾದ ಏಕತೆಗೆ ಧಕ್ಕೆ ತರುವಂತೆ ಮಾತನಾಡಿದರೆ ಅವರನ್ನೂ ಈ ಕಾಯಿದೆ ಅಡಿ ಅಪರಾಧಿ ಎನ್ನಲಾಗುತ್ತದೆ. ಇದು ಚೀನಾಕ್ಕೆ ಪ್ರಯಾಣಿಸುವ ವಿದೇಶಿ ಪ್ರಜೆಗಳನ್ನು ಹೆದರಿಸಲು ಬಳಸುವ ಅಸ್ತ್ರ ಎಂದು ತೈವಾನ್ ಆತಂಕ ವ್ಯಕ್ತಪಡಿಸಿದೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ