➤ ನೋಂದಣಿ ಅವಧಿ ವಿಸ್ತರಣೆ:
- ಹೊಸ ನಿಯಮಗಳ ಪ್ರಕಾರ, ಭಾರತಕ್ಕೆ ಬರುವ ವಿದೇಶಿ ನಾಗರಿಕರು ತಾವು ದೇಶಕ್ಕೆ ಬಂದ ದಿನದಿಂದ 180 ದಿನಗಳು ಮುಗಿಯುವ ಮುನ್ನ ಯಾವುದೇ ಸಮಯದಲ್ಲಿ ತಮ್ಮ ನೋಂದಣಿಯನ್ನು ಆನ್‌ಲೈನ್ ಪೋರ್ಟಲ್ ಮೂಲಕ ಪೂರ್ಣಗೊಳಿಸಬಹುದು.
- ಈ ಹಿಂದೆ, ವಿದೇಶಿಗರು ಭಾರತಕ್ಕೆ ಬಂದು 180 ದಿನಗಳು ಕಳೆದ ನಂತರ, ಮುಂದಿನ 14 ದಿನಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮವಿತ್ತು.
- ಇನ್ನು ಮುಂದೆ ನಿಗದಿತ 180 ದಿನಗಳ ಅವಧಿ ಮೀರಿದ ನಂತರ ನೋಂದಣಿ ಮಾಡಿಕೊಳ್ಳಲು ಕೇವಲ ಅತ್ಯಂತ ತುರ್ತು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಅಧಿಕಾರಿಗಳು ವಿಶೇಷ ಅನುಮತಿ ನೀಡಲಿದ್ದಾರೆ.
- ವಲಸೆ ಅಧಿಕಾರಿಗಳ ಆದೇಶ ಅಥವಾ ನಿರ್ಧಾರಗಳ ವಿರುದ್ಧ ವಿದೇಶಿಗರು ಅಥವಾ ಸಂಬಂಧಪಟ್ಟವರು ಆನ್‌ಲೈನ್ ಪೋರ್ಟಲ್ ಮೂಲಕ 30 ದಿನಗಳ ಒಳಗಾಗಿ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ಹೀಗೆ ಸಲ್ಲಿಕೆಯಾದ ಮೇಲ್ಮನವಿಗಳನ್ನು ಮೇಲಧಿಕಾರಿಗಳು ಕಡ್ಡಾಯವಾಗಿ 60 ದಿನಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎಂದು ಕಾಲಮಿತಿಯನ್ನು ವಿಧಿಸಲಾಗಿದೆ. ಇದು ಇಮಿಗ್ರೇಷನ್ ವ್ಯವಸ್ಥೆಯಲ್ಲಿ ಉತ್ತರದಾಯಿತ್ವವನ್ನು ಹೆಚ್ಚಿಸುತ್ತದೆ.
- ಮಗುವಿನ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಆ ಮಗುವಿನ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸಿದರೆ, ಅಂತಹ ಮಕ್ಕಳಿಗೆ ಈ ವಿದೇಶಿ ನೋಂದಣಿ ನಿಯಮಗಳು ಅನ್ವಯಿಸುವುದಿಲ್ಲ.
- ಒಂದು ವೇಳೆ ಭಾರತದಲ್ಲಿ ವಾಸಿಸುತ್ತಿರುವಾಗ ಯಾವುದೇ ಮಗು ವಿದೇಶಿ ಪೌರತ್ವವನ್ನು ಪಡೆದುಕೊಂಡರೆ, ಆ ವಿಷಯವನ್ನು ಪೋಷಕರು ಕಡ್ಡಾಯವಾಗಿ 30 ದಿನಗಳ ಒಳಗಾಗಿ ಸಂಬಂಧಪಟ್ಟ ನೋಂದಣಿ ಅಧಿಕಾರಿಗೆ (FRRO) ಲಿಖಿತವಾಗಿ ತಿಳಿಸಬೇಕು.