➤ ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರ ಭಾನುವಾರದಂದು ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಇದು ಅವರ ಸತತ 9ನೇ ಬಜೆಟ್ ಮಂಡನೆಯಾಗಿದ್ದು, ಭಾನುವಾರದಂದು ಬಜೆಟ್ ಮಂಡನೆಯಾದ ದೇಶದ ಮೊದಲ ಅಪರೂಪದ ಸಂದರ್ಭಕ್ಕೆ ಭಾರತ ಸಾಕ್ಷಿಯಾಯಿತು.
➤ ವಲಯ / ಇಲಾಖೆಹಂಚಿಕೆಯಾದ ಮೊತ್ತ (ಕೋಟಿ ರೂ.ಗಳಲ್ಲಿ)
1.ಸಾರಿಗೆ (Transport) - ₹5,98,520
2.ರಕ್ಷಣೆ (Defence)-₹5,94,585
3.ಗ್ರಾಮೀಣಾಭಿವೃದ್ಧಿ-₹2,73,108
4.ಗೃಹ ವ್ಯವಹಾರಗಳು-₹2,55,234
5.ಕೃಷಿ ಮತ್ತು ಸಂಬಂಧಿತ ಚಟುವಟಿಕೆ-₹1,62,671
6.ಶಿಕ್ಷಣ-₹1,39,289
7.ಶಕ್ತಿ(Energy)-₹1,09,029
8.ಆರೋಗ್ಯ-₹1,04,599
9.ನಗರಾಭಿವೃದ್ಧಿ-₹85,522
10.ಐಟಿ ಮತ್ತು ಟೆಲಿಕಾಂ-₹74,560
11.ವಾಣಿಜ್ಯ ಮತ್ತು ಉದ್ಯಮ-₹70,296
12.ಸಾಮಾಜಿಕ ಕಲ್ಯಾಣ-₹62,362
13.ವಿಜ್ಞಾನ ವಿಭಾಗ-₹55,756
14.ತೆರಿಗೆ ಆಡಳಿತ-₹45,500
15.ವಿದೇಶಾಂಗ ವ್ಯವಹಾರ-₹22,119
16.ಆರ್ಥಿಕ ಇಲಾಖೆ-₹20,649
17.ಈಶಾನ್ಯ ರಾಜ್ಯ ಅಭಿವೃದ್ಧಿ-₹6,812
➤ ಬಜೆಟ್ ಅಂಕಿ-ಅಂಶಗಳು (Budget Estimates)
- ಒಟ್ಟು ವೆಚ್ಚ: ₹53.5 ಲಕ್ಷ ಕೋಟಿ.
- ಸಾಲೇತರ ಸ್ವೀಕೃತಿ: ₹36.5 ಲಕ್ಷ ಕೋಟಿ.
- ವಿತ್ತೀಯ ಕೊರತೆ (Fiscal Deficit): ಜಿಡಿಪಿಯ 4.3% ಎಂದು ಅಂದಾಜಿಸಲಾಗಿದೆ.
- ಸಾಲ ಮತ್ತು ಜಿಡಿಪಿ ಅನುಪಾತ: 55.6%. 
ಜನವರಿ ತಿಂಗಳ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ