* ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ (MDRF) ಸಹಭಾಗಿತ್ವದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸ್ಥಾಪಿಸಿದ ಭಾರತದ ಮೊದಲ ಮಧುಮೇಹ ಬಯೋಬ್ಯಾಂಕ್ ಅನ್ನುಚೆನ್ನೈ ಸ್ಥಾಪಿಸಲಾಗಿದೆ.
* ಮಧುಮೇಹ ಕುರಿತು ಸಂಶೋಧನೆಗೆ ನೆರವಾಗುವ ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಚೆನ್ನೈನಲ್ಲಿ ಸ್ಥಾಪಿಸಿದೆ.
* ಮಧುಮೇಹಕ್ಕೆ ಸಂಬಂಧಿಸಿದ ಜೈವಿಕ ಮಾದರಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ದತ್ತಾಂಶ ಸಿದ್ಧಪಡಿಸಲಾಗುವುದು’ ಎಂದು ಎಂಡಿಆರ್‌ಎಫ್ ಮುಖ್ಯಸ್ಥ ಡಾ.ವಿ.ಮೋಹನ್ ಅವರು ತಿಳಿಸಿದ್ದಾರೆ.
* ಡಯಾಬಿಟಿಸ್‌ಗೆ ಕಾರಣವಾಗುವ ಅಂಶಗಳು, ಡಯಾಬಿಟಿಸ್‌ನಿಂದ ಕಂಡು ಬರುವ ಇತರ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಸಂಶೋಧನೆಗೆ ದತ್ತಾಂಶ ಒದಗಿಸಲಾಗುವುದು ಎಂದೂ ಮೋಹನ್ ಅವರು ತಿಳಿಸಿದ್ದಾರೆ.
* ಟೈಪ್-1, ಟೈಪ್-2 ಹಾಗೂ ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರಲ್ಲಿ ಕಂಡುಬರುವ ಡಯಾಬಿಟಿಸ್ ಹಾಗೂ ಮಕ್ಕಳಲ್ಲಿ ಕಾಣಿಸುವ ಡಯಾಬಿಟಿಸ್‌ಗೆ ಸಂಬಂಧಿಸಿದ ರಕ್ತದ ಮಾದರಿಗಳ ಸಂಗ್ರಹ ಇಲ್ಲಿದೆ ಎಂದು ತಿಳಿಸಿದ್ದಾರೆ.
* 'ಡಯಾಬಿಟಿಸ್ ಬಯೋಬ್ಯಾಂಕ್' ಸ್ಥಾಪನೆಯ ಉದ್ದೇಶ ಹಾಗೂ ಸಂಸ್ಥೆ ಕುರಿತು ಸಮಗ್ರ ವಿವರಗಳನ್ನು ಒಳಗೊಂಡ ವರದಿ "ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್'ನಲ್ಲಿ ಪ್ರಕಟವಾಗಿದೆ.
ಸೋಮವಾರ, 16 ಡಿಸೆಂಬರ್ 2024
10:46 ಪೂರ್ವಾಹ್ನ
Daily PDF
ಚೆನ್ನೈನಲ್ಲಿ ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಸ್ಥಾಪನೆ
Authored by:
Siddaram Halli