-
ಖೇಲೋ ಇಂಡಿಯಾ (Khelo India Scheme): ಕ್ರೀಡಾ ಮೂಲಸೌಕರ್ಯ, ಮೂಲಭೂತ ಹಂತದ (Grassroots) ಪ್ರತಿಭೆಗಳ ಶೋಧ ಮತ್ತು ತರಬೇತಿಗೆ ₹29,054 ಕೋಟಿ ಮೀಸಲಿಡಲಾಗಿದೆ. (ಇದು ಹಿಂದಿನ ಯೋಜನೆಯ ಆಯವ್ಯಯಕ್ಕಿಂತ ಸುಮಾರು 8 ಪಟ್ಟು ಹೆಚ್ಚು).
-
ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೆರವು (ANSF): ಕ್ರೀಡಾಪಟುಗಳ ತರಬೇತಿ, ವಿದೇಶಿ ತರಬೇತುದಾರರ ನೇಮಕ, ಆಧುನಿಕ ಉಪಕರಣಗಳು ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ₹7,387 ಕೋಟಿ ಒದಗಿಸಲಾಗಿದೆ.
-
ಖೇಲೋ ಇಂಡಿಯಾ ಫೀಡರ್ ಸ್ಕೂಲ್ಸ್ (KIFS): ಆರಂಭಿಕ ಹಂತದಲ್ಲೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು.
-
ಖೇಲೋ ಇಂಡಿಯಾ ಉತ್ಕೃಷ್ಟ ವಿದ್ಯಾಲಯಗಳು (KIUV): ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಗೆ ಅನುಗುಣವಾಗಿ ಸಾಮಾನ್ಯ ಶಿಕ್ಷಣದೊಂದಿಗೆ ಕ್ರೀಡಾ ತರಬೇತಿಯನ್ನು ನೀಡುವ ಮಾದರಿ ಶಾಲೆಗಳು.
-
ಕ್ರೀಡಾಪಟುಗಳ ಡೇಟಾಬೇಸ್, ಮೂಲಸೌಕರ್ಯಗಳ ಲಭ್ಯತೆ.
-
ಫಿಟ್ ಇಂಡಿಯಾ (Fit India) ಭಾಗವಹಿಸುವಿಕೆ ಮತ್ತು ಆನ್‌ಲೈನ್ ಟ್ಯಾಲೆಂಟ್ ಅಸೆಸ್‌ಮೆಂಟ್.
-
ಮಹಿಳಾ ಮತ್ತು ಪ್ಯಾರಾ-ಅಥ್ಲೀಟ್‌ಗಳಿಗೆ ಹೆಚ್ಚಿನ ಪ್ರಾತಿನಿಧ್ಯ.
-
ದೇಶೀಯ/ಪರಂಪರಾಗತ ಕ್ರೀಡೆಗಳಿಗೆ (Indigenous Sports) ಪ್ರೋತ್ಸಾಹ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಿಕೆ.
-
ಗ್ಲೋಬಲ್ ಸೌತ್ (Global South) ದೇಶಗಳೊಂದಿಗೆ ಕ್ರೀಡಾ ಸಹಕಾರ.