➤ ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟವು ಹಿರಿಯ ನಾಗರಿಕರು, ವಿಧವಾ(ವಿಧವೆಯರು), ಮತ್ತು ದಿವ್ಯಾಂಗರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ (National Social Assistance Programme - NSAP) ಮುಂದುವರಿಕೆಗೆ ಐದು ವರ್ಷಗಳ ಅವಧಿಗೆ (2026-27 ರಿಂದ 2030-31 ರವರೆಗೆ) ₹53,428 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಅನುಮೋದಿಸಿದೆ.
➤ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಡಿಯಲ್ಲಿ ದೇಶದ ಸುಮಾರು 3.20 ಕೋಟಿ ಫಲಾನುಭವಿಗಳಿಗೆ ನೆರವು ಸಿಗಲಿದೆ.
➤ ಕಾರ್ಯಕ್ರಮದ ಹೆಸರಿನ ಬದಲಾವಣೆ (New Names of Schemes):ಈ ಬಾರಿಯ ತೀರ್ಪಿನಲ್ಲಿ NSAP ಕಾರ್ಯಕ್ರಮ ಹಾಗೂ ಅದರ ಉಪಯೋಜನೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಹೊಸ ಹೆಸರುಗಳ ವಿವರ ಇಲ್ಲಿದೆ:
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP): ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ (Pradhan Mantri Samajik Sahayata Yojana)
1. ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS): ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ
2. ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (IGNWPS): ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ
3. ಇಂದಿರಾಗಾಂಧಿ ರಾಷ್ಟ್ರೀಯ ದಿವ್ಯಾಂಗ ಪಿಂಚಣಿ ಯೋಜನೆ (IGNDPS): ಪ್ರಧಾನಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ
4. ರಾಷ್ಟ್ರೀಯ ಕುಟುಂಬ ಲಾಭ ಯೋಜನೆ (NFBS): ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ
➤ ದಿವ್ಯಾಂಗಜನ ಪಿಂಚಣಿ ಯೋಜನೆಯಲ್ಲಿ ಪ್ರಮುಖ ತಿದ್ದುಪಡಿಗಳು: ಈ ಹೊಸ ವಿಸ್ತರಣೆಯಲ್ಲಿ ವಿಶೇಷವಾಗಿ ದಿವ್ಯಾಂಗರ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡಗಳನ್ನು ಸುಲಭಗೊಳಿಸಲಾಗಿದೆ:
- ಅಂಗವೈಕಲ್ಯದ ಮಿತಿ (Disability Threshold): ಈ ಹಿಂದೆ ಪಿಂಚಣಿ ಪಡೆಯಲು ಶೇಕಡಾ 80% ರಷ್ಟು ಅಂಗವೈಕಲ್ಯ ಕಡ್ಡಾಯವಾಗಿರಬೇಕಿತ್ತು. ಆದರೆ ಈಗ ‘ಅಂಗವೈಕಲ್ಯ ಹಕ್ಕುಗಳ ಕಾಯ್ದೆ, 2016’ (RPwD Act, 2016) ಪ್ರಕಾರ ಇದನ್ನು 40% ಕ್ಕೆ ಇಳಿಸಲಾಗಿದೆ.
- ವಯಸ್ಸಿನ ಅರ್ಹತೆ: ಹುಟ್ಟಿನಿಂದಲೇ (From birth) ಅರ್ಹತೆ ಅನ್ವಯವಾಗುವಂತೆ ತಿದ್ದುಪಡಿ ತರಲಾಗಿದೆ.
- 0 ರಿಂದ 79 ವರ್ಷದ ವಯೋಮಾನದವರಿಗೆ ₹375 ಹಾಗೂ 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ₹625 ವರೆಗಿನ ಪಿಂಚಣಿ ನೆರವು ಮುಂದುವರಿಯಲಿದೆ.