* ಬ್ರಿಟನ್ ಸಂಸತ್ ಗೆ (ಹೌಸ್ ಆಫ್ ಕಾಮನ್ಸ್) 650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 370 ಕ್ಷೇತ್ರಗಳಲ್ಲಿ ಲೇಬರ್ ಪಾರ್ಟಿ ಭಾರಿ ಮುನ್ನಡೆ ಸಾಧಿಸಿದೆ. ಕನ್ಸರ್ವೇಟಿವ್ ಪಕ್ಷ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
* ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಭಾರಿ ಜಯಗಳಿಸಿದ ನಂತರ ಕೀರ್ ಸ್ಟಾರ್ಮರ್ ಬ್ರಿಟನ್ ನೂತನ ಪ್ರಧಾನಿಯಾಗಲಿದ್ದಾರೆ.
* ಚುನಾವಣೆಯಲ್ಲಿ ಲೇಬರ್ ಪಕ್ಷ ಬಹುಮತ ಪಡೆಯುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿಯಾಗಿ ಬ್ರಿಟನ್ ದೊರೆ ಚಾರ್ಲ್ಸ್-3 ಅವರು ಜುಲೈ 05 ರಂದು (ಶುಕ್ರವಾರ) ನೇಮಕ ಮಾಡಿದರು.
* ಕನ್ಸರ್ವೇಟಿವ್ ಪಕ್ಷ ಸೋಲುತ್ತಿದಂತೆ ರಿಷಿ ಸುನಾಕ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿದಾಯ ಘೋಷಿಸಿದ್ದಾರೆ.
* ಬ್ರಿಟನ್ ಸಂಸತ್ ಚುನಾವಣೆಯಲ್ಲಿ26 ಮಂದಿ ಭಾರತೀಯ ಮೂಲದವರು ಜಯ ಗಳಿಸಿದ್ದಾರೆ. ಸುನಕ್ ಸಂಪುಟದದಲ್ಲಿದ್ದ ಸುಯೆಲ್ಲಾಬ್ರೇವ್‌ರ್ಮನ್, ಪ್ರೀತಿ ಪಟೇಲ್, ಗೋವಾ ಮೂಲದ ಕ್ಲಾರಿ ಕುಟಿನ್ಹೊ, ಗಗನ್ ಮಹೀಂದ್ರಾ, ಶಿವಾನಿ ರಾಜ ಜಯ ಸಾಧಿಸಿದ್ದಾರೆ.
* ಸೀಮಾ ಮಲ್ಹೋತ್ರಾ, ವಲೇರಿ ವಾಜ್, ಲಿಸಾ ನ್ಯಾಂಡಿ, ಪ್ರೀತ್ ಕೌರ್ ಗಿಲ್, ತನ್‌ಮನ್‌ಜೀತ್ ಸಿಂಗ್,ಜಸ್ ಅತ್ವಾಲ್, ಬಗ್ಗಿ ಶಂಕರ್, ಸತ್ವೀರ್‌ಕೌರ್, ಹರ್‌ಪ್ರೀತ್ ಉಪ್ಪಲ್, ವರಿಂದರ್ ಜಸ್, ಗುರಿಂದರ್‌ಜೋಸನ್, ಕನಿಷ್ಕ ನಾರಾಯಣ್, ಸೋನಿಯಾ ಕುಮಾರ್, ಸುರೀನಾ ಬ್ರಕೆನ್‌ಬಿಜ್, ಕೀರ್ತಿ ಎಂಟ್ವಿಸಲ್, ಜೀವನ್ ಸಂದೆರ್, ಸೋಜನ್ ಜೋಸೆಫ್ ಲೇಬರ್ ಪಕ್ಷದಿಂದ ಸಂಸತ್‌ಗೆ ಆಯ್ಕೆಯಾದ ಭಾರತೀಯ ಮೂಲದ ಸಂಸದರಾಗಿದ್ದಾರೆ.
ಚುನಾವಣೆ ಫಲಿತಾಂಶ
ಒಟ್ಟು ಸ್ಥಾನಗಳು - 650
ಲೇಬರ್ ಪಕ್ಷ - 412
ಕನ್ಸರ್ವೇಟಿವ್ - 121
ಲಿಬರಲ್ ಡೆಮೋಕ್ರಾಟ್ಸ್ - 71
ಇತರೆ - 46
ಶನಿವಾರ, 06 ಜುಲೈ 2024
10:46 ಪೂರ್ವಾಹ್ನ
Daily PDF
ಬ್ರಿಟನ್ನಲ್ಲಿ ಲೇಬರ್ ಪಕ್ಷಕ್ಕೆ ಗೆಲುವು : ಕೀರ್ ಸ್ಟಾರ್ಮರ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆ
Authored by:
Bhagya R K