* ಪ್ರಧಾನಿ ನರೇಂದ್ರ ಮೋದಿ ಅವರು ಅ.22ರಿಂದ ಎರಡು ದಿನ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ.
* ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಕಜಾನ್‌ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
* ಜಾಗತಿಕ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವುದು ಈ ಬಾರಿಯ ಬ್ರಿಕ್ಸ್ ಶೃಂಗದ ಧ್ಯೇಯವಾಗಿದೆ.
* ರಷ್ಯಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಅವರು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಮತ್ತು ಕಜಾನ್‌ನಲ್ಲಿ ಆಹ್ವಾನಿತ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.
* BRIC (ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ) ರಾಷ್ಟ್ರಗಳ ನಾಯಕರು 2006 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.
* ಉನ್ನತ ಮಟ್ಟದ ಸರಣಿ ಸಭೆ ನಂತರ ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ 2009 ರಲ್ಲಿ ಮೊದಲ BRIC ಶೃಂಗಸಭೆ ನಡೆದಿತ್ತು.
* ಸೆಪ್ಟೆಂಬರ್ 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ BRIC ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಪೂರ್ಣ ಸದಸ್ಯರಾಗಿ ಸೇರ್ಪಡೆ ಮಾಡಿಕೊಂಡ ನಂತರ BRIC ಗುಂಪನ್ನು BRICS (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಎಂದು ಮರುನಾಮಕರಣ ಮಾಡಲಾಯಿತು.
* ವಿಶ್ವದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ BRICS ಪ್ರಮುಖ ಗುಂಪಾಗಿದ್ದು, ವಿಶ್ವದ ಶೇ.41 ರಷ್ಟು ಜನಸಂಖ್ಯೆ, ಶೇ. 24 ರಷ್ಟು ಜಿಡಿಪಿ ಮತ್ತು ಶೇ. 16 ರಷ್ಟು ವಿಶ್ವ ವ್ಯಾಪಾರದಲ್ಲಿ ಪಾಲನ್ನು ಹೊಂದಿದೆ.
ಶನಿವಾರ, 19 ಅಕ್ಟೋಬರ್ 2024
11:14 ಪೂರ್ವಾಹ್ನ
Daily PDF
ಬ್ರಿಕ್ಸ್ ಶೃಂಗಸಭೆ: ಅಕ್ಟೋಬರ್.22ರಿಂದ ಮೋದಿ ರಷ್ಯಾ ಪ್ರವಾಸ
Authored by:
Jyoti Angadi