➤ ನವದೆಹಲಿ: ರಾಜಧಾನಿ ದೆಹಲಿಯ ಸಂವಿಧಾನ ಸದನದ (ಹಳೆಯ ಸಂಸತ್ ಭವನ) ಸೆಂಟ್ರಲ್ ಹಾಲ್ನಲ್ಲಿ 12ನೇ ಬ್ರಿಕ್ಸ್ (BRICS) ಸಂಸದೀಯ ಒಕ್ಕೂಟದ ಸಭೆ ( BRICS Parliamentary Forum) ಸೋಮವಾರದಂದು (ಅಕ್ಟೋಬರ್ 26, 2026) ವೈಭವಯುತವಾಗಿ ಆರಂಭಗೊಂಡಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರು ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದರು.
- ಘಟನೆ: 12ನೇ ಬ್ರಿಕ್ಸ್ ಸಂಸದೀಯ ಒಕ್ಕೂಟದ ಸಭೆ (12th BRICS Parliamentary Forum)
- ಉದ್ಘಾಟನೆ: ಓಂ ಬಿರ್ಲಾ (ಲೋಕಸಭಾ ಅಧ್ಯಕ್ಷರು)
- ಸ್ಥಳ: ಸಂವಿಧಾನ ಸದನ (ಸೆಂಟ್ರಲ್ ಹಾಲ್), ನವದೆಹಲಿ
- ಭಾರತದ ಅಧ್ಯಕ್ಷತೆ: ಜೂನ್ 2025ರಲ್ಲಿ ಬ್ರೆಸಿಲಿಯಾದಲ್ಲಿ ನಡೆದ 11ನೇ ಆವೃತ್ತಿಯ ಸಭೆಯಲ್ಲಿ ಭಾರತವು ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
- ಸಭೆಯ ಪ್ರಮುಖ ಥೀಮ್/ವಿಷಯ: ಸಂಸದೀಯ ಸಹಕಾರ ಬಲಪಡಿಸುವುದು, ಜಾಗತಿಕ ಸವಾಲುಗಳ ನಿರ್ವಹಣೆ ಮತ್ತು ಜನಕೇಂದ್ರಿತ ಅಭಿವೃದ್ಧಿ.
➤ ಓಂ ಬಿರ್ಲಾ ಅವರ ಭಾಷಣದ ಪ್ರಮುಖಾಂಶಗಳು: ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು, ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಮತ್ತು ಬಾಂಧವ್ಯ ಹೆಚ್ಚಿಸಲು ರಾಜತಾಂತ್ರಿಕತೆ (Diplomacy) ಹಾಗೂ ನಿರಂತರ ಮಾತುಕತೆಯೇ (Dialogue) ಅತ್ಯುತ್ತಮ ಮಾರ್ಗ ಎಂದು ಪ್ರತಿಪಾದಿಸಿದರು.
1. ಜಾಗತಿಕ ಸವಾಲುಗಳು ಸೀಮಿತವಲ್ಲ: ಪ್ರಾದೇಶಿಕ ಸಂಘರ್ಷ, ಯುದ್ಧ, ಆರ್ಥಿಕ ಅಸ್ಥಿರತೆ, ವ್ಯಾಪಾರ ಬಿಕ್ಕಟ್ಟು, ಭಯೋತ್ಪಾದನೆ ಮತ್ತು ಹವಾಮಾನ ವೈಪರೀತ್ಯಗಳಂತಹ ಸವಾಲುಗಳು ಯಾವುದೇ ಒಂದು ದೇಶದ ಗಡಿಗೆ ಸೀಮಿತವಾಗಿಲ್ಲ. ಇವುಗಳನ್ನು ಎದುರಿಸಲು ನಿರಂತರ ಸಂವಾದ ಮತ್ತು ಪರಸ್ಪರ ಸಹಕಾರ ಅಗತ್ಯ.
2. ಪರಿಹಾರಗಳ ಪರಿಸರ ವ್ಯವಸ್ಥೆ (Ecosystem of Solutions): ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಂತೆ ಬ್ರಿಕ್ಸ್ ಒಕ್ಕೂಟವನ್ನು 'ಪರಿಹಾರಗಳ ಪರಿಸರ ವ್ಯವಸ್ಥೆ'ಯನ್ನಾಗಿ ಮಾಡಬೇಕು.
3. ಸಂವಾದಗಳು ಕ್ರಿಯೆಯಾಗಿ ಬದಲಾಗಬೇಕು: ಬ್ರಿಕ್ಸ್ ಸಭೆಯ ಯಶಸ್ಸು ಕೇವಲ ಚರ್ಚೆಗೆ ಸೀಮಿತವಾಗದೆ, ಸಾರ್ವಜನಿಕರ ಜೀವನದ ಮೇಲೆ ಬೀರಬಹುದಾದ ಧನಾತ್ಮಕ ಪರಿಣಾಮದಿಂದ ಅಳೆಯಲ್ಪಡುತ್ತದೆ ಎಂದು ಅವರು ಹೇಳಿದರು.
➤ ಪ್ರಧಾನಿ ನರೇಂದ್ರ ಮೋದಿ ಭೇಟಿ ಮತ್ತು ಚರ್ಚೆ: ಸೋಮವಾರದಂದು(26-10-2026) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಭಾಗವಹಿಸಿ, ಆಗಮಿಸಿದ್ದ ವಿದೇಶಿ ಪ್ರತಿನಿಧಿಗಳು ಹಾಗೂ ವಿವಿಧ ದೇಶಗಳ ಸಂಸದೀಯ ನಾಯಕರನ್ನು ಭೇಟಿಯಾದರು.
ಸಂಸದೀಯ ಸಹಕಾರವನ್ನು ಹೆಚ್ಛಿಸುವುದು, ಕೃತಕ ಬುದ್ಧಿಮತ್ತೆ (AI Governance), ದಕ್ಷಿಣ-ದಕ್ಷಿಣ ಸಹಕಾರ (South-South Cooperation), ಮತ್ತು ಜನಕೇಂದ್ರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ಮಾರ್ಗಗಳ ಕುರಿತು ಪ್ರಧಾನಿಯವರು ಮತ್ತು ಬ್ರಿಕ್ಸ್ ಒಕ್ಕೂಟದ ನಾಯಕರು ಚರ್ಚೆ ನಡೆಸಿದರು.
12ನೇ ಬ್ರಿಕ್ಸ್ ಸಂಸದೀಯ ಒಕ್ಕೂಟದ ಸಭೆ 2026: ನವದೆಹಲಿಯಲ್ಲಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಚಾಲನೆ
Published by Akshata Halli
2 hours ago