* ಯೂಟ್ಯೂಬ್ ಶಾರ್ಟ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಫೇಸ್‌ಬುಕ್ ವೀಡಿಯೊಗಳನ್ನು ಸ್ಕ್ರೋಲ್ ಮಾಡಲು ನೀವು ಎಷ್ಟು ಸಮಯವನ್ನು ಕಳೆಯುತ್ತೀರಿ. ಈ ಬುದ್ದಿಹೀನ ಸ್ಕ್ರೋಲಿಂಗ್ ಈಗ ಆಕ್ಸ್‌ಫರ್ಡ್ ನಿಘಂಟಿನಲ್ಲಿ "ಬ್ರೈನ್ ರಾಟ್"('ಮೆದುಳು ಕೊಳೆತ') ಎಂಬ ಪದವನ್ನು ಹೊಂದಿದೆ.
* "ಬ್ರೈನ್ ರಾಟ್ " ಅನ್ನು 2024 ರ ವರ್ಷದ ಆಕ್ಸ್‌ಫರ್ಡ್ ಪದ ಎಂದು ಹೆಸರಿಸಲಾಗಿದೆ. ಕೆಲಸಗಳ ಮಧ್ಯೆ ಪದೇ ಪದೇ ಮೊಬೈಲ್ ನೋಡುವುದು, 1 ಬೈಟ್ ನಷ್ಟಿದ್ದರೂ ವೀಡಿಯೋಗಳನ್ನು ಸ್ಕಿಪ್ ಮಾಡುತ್ತಾ ಗಂಟೆಗಟ್ಟಲೆ ಕಳೆಯುವುದನ್ನು “ಬ್ರೈನ್ ರಾಟ್’ ಎಂಬ ಪದದಿಂದ ಗುರುತಿಸಲಾಗುತ್ತಿದೆ.
* ಈ ಪದವು 2023 ಮತ್ತು 2024ರ ನಡುವೆ ಬಳಕೆಯ ಆವರ್ತನದಲ್ಲಿ 230% ರಷ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫರ್ಡ್ ಸಂಸ್ಥೆ ಹೇಳಿದೆ.
* 2024 ರ ಆಕ್ಸ್‌ಫರ್ಡ್‌ನ ವರ್ಷದ ಪದವು ಬ್ರೈನ್ ರಾಟ್ ('ಮೆದುಳು ಕೊಳೆತ') ಆಗಿದೆ, ಇದು ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯ ಪರಿಣಾಮ ಮತ್ತು ಆನ್‌ಲೈನ್‌ನಲ್ಲಿ ಮನಸ್ಸಿಗೆ ಮುದ ನೀಡುವ ವಿಷಯದ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
* 'ಮೆದುಳಿನ ಕೊಳೆತ'ವನ್ನು "ವ್ಯಕ್ತಿಯ ಮಾನಸಿಕ ಅಥವಾ ಬೌದ್ಧಿಕ ಸ್ಥಿತಿಯ ಹದಗೆಡಿಸುವಿಕೆ ಎಂದು ವ್ಯಾಖ್ಯಾನಿಸಲಾಗಿದೆ, ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಕಾಲ ಕಳೆಯುವ ಮೂಲಕ ಸಾಮಾನ್ಯ ಜೀವನದಿಂದ ವಿಮುಖವಾಗುವುದನ್ನು ಸೂಚಿಸುತ್ತದೆ.
* ಬಿಬಿಸಿ ವರದಿಯೊಂದು ಈ ಪದಗುಚ್ಛದ ಜನಪ್ರಿಯತೆಯು "ನಾವು ವಾಸಿಸುತ್ತಿರುವ ಸಮಯದ ಲಕ್ಷಣ" ಎಂದು ಹೇಳಿದೆ.
* 2023, 2022 ಮತ್ತು 2021 ರಲ್ಲಿ ಕ್ರಮವಾಗಿ 'ರಿಜ್', 'ಗಾಬ್ಲಿನ್ ಮೋಡ್' ಮತ್ತು 'ವ್ಯಾಕ್ಸ್' ಎಂಬ ವರ್ಷದ ಆಕ್ಸ್‌ಫರ್ಡ್ ಪದಗಳಾಗಿವೆ.
"ಬ್ರೈನ್ ರಾಟ್" ಪದವನ್ನು ಆಕ್ಸ್‌ಫರ್ಡ್ ವರ್ಡ್ ಆಫ್ ದಿ ಇಯರ್ 2024 ಎಂದು ಆಯ್ಕೆ
Published by Jyoti Angadi
04 ಡಿಸೆಂಬರ್ 2024