* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2025 ರ 7ನೇ ಆವೃತ್ತಿಯನ್ನು ವಿಡಿಯೋ ಸಂದೇಶದ ಮೂಲಕ ಉದ್ಘಾಟಿಸಿದರು.
* ಅವರು ತಮ್ಮ ಭಾಷಣದಲ್ಲಿ, ಖೇಲೋ ಇಂಡಿಯಾ ಕ್ರೀಡಾ ಕೌಶಲ್ಯಗಳನ್ನು ಉತ್ತೇಜಿಸುವ ಸಮಗ್ರ ವೇದಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಕ್ರೀಡಾ ಕೇಂದ್ರಗಳು ಯುವ ಪ್ರತಿಭೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತಿವೆ ಎಂದು ಹೇಳಿದರು.
* ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕ್ರೀಡೆ ಮೃದು ಶಕ್ತಿಯ ಪ್ರತೀಕವಾಗಿದ್ದು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನೀಡುತ್ತವೆ ಎಂದರು. 
* ಬಿಹಾರದ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ಶ್ಲಾಘನೆ ಮಾಡಿದರು. ಬಿಹಾರದ ರಾಜಗೀರ್ ಕ್ರೀಡಾ ಸಂಕೀರ್ಣ ಹಾಗೂ ಕ್ರೀಡಾ ವಿಶ್ವವಿದ್ಯಾಲಯದ ಹೆಸರಿಸಿ ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿದರು.
* ಸಮಾರಂಭದಲ್ಲಿ ಸಿಎಂ ನಿತೀಶ್ ಕುಮಾರ್ ಹಾಗೂ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು.